ನೀನಾಸಮ್ ಬೇಸಿಗೆ ರಂಗತರಬೇತಿ ಶಿಬಿರ 2026

Apr 5, 2026 | Announcements

ಕಳೆದ ಎರಡೂವರೆ ದಶಕಗಳಿಂದ ರಂಗತರಬೇತಿ ನಡೆಸುತ್ತಿರುವ ನೀನಾಸಮ್ ರಂಗಶಿಕ್ಷಣ ಕೇಂದ್ರವು ಇದೇ 2026 ಮೇ 11ರಿಂದ 31ರ ವರೆಗೆ 21 ದಿನಗಳ ರಂಗತರಬೇತಿ ಶಿಬಿರವೊಂದನ್ನು ನಡೆಸುತ್ತಿದೆ. ಈ ಶಿಬಿರದಲ್ಲಿ ರಂಗಶಿಕ್ಷಣ ಕೇಂದ್ರದ ಅಧ್ಯಾಪಕರು ಮತ್ತು ಅತಿಥಿ ಅಧ್ಯಾಪಕರು ತರಬೇತಿ ನಡೆಸಿಕೊಡುತ್ತಾರೆ. ರಂಗಮಾಧ್ಯಮದ ಪ್ರಾಯೋಗಿಕ ಮತ್ತು ಸೈದ್ಧಾಂತಿಕ ವಿಚಾರಗಳ ಬಗ್ಗೆ ಈ ಶಿಬಿರದಲ್ಲಿ ಮಾಹಿತಿಗಳನ್ನು ನೀಡುವ ಜತೆಗೆ ಶಿಬಿರಾರ್ಥಿಗಳಿಗೆ ನುರಿತ ನಿರ್ದೇಶಕರಿಂದ ರಂಗನಾಟಕ ಪ್ರಯೋಗಗಳನ್ನೂ ಮಾಡಿಸಲಾಗುತ್ತದೆ. ಈ ಶಿಬಿರವು ರಂಗಭೂಮಿಯನ್ನು ಪ್ರವೇಶಿಸಬಯಸುವ ಹೊಸಬರಿಗೆ ಮತ್ತು ರಂಗಭೂಮಿಯಲ್ಲಿ ಅನುಭವವಿದ್ದು ಅದನ್ನು ಬೆಳೆಸಿಕೊಳ್ಳಲು ಬಯಸುವವರಿಗೆ ಉಪಯುಕ್ತವಾಗುತ್ತದೆ.

Ninasam Theatre Institute has been conducting this Summer theatre workshop for the last several years. This year, the workshop is being held from 11th to 31st of May 2026 (both days included). As in the earlier workshops, the workshop sessions are conducted mainly by the teachers from the Ninasam Theatre Institute and guest faculty. A basic introduction to the various aspects of theatre, and some practical classes on sound, movement and design are conducted as part of the workshop. The workshop will also include a short theatre production by the participants, created during the sessions, the presentation of which will take place on the last day.