Summer workshop | ಬೇಸಿಗೆ ರಂಗ ತರಬೇತಿ ಶಿಬಿರ
ನೀನಾಸಮ್ ರಂಗಶಿಕ್ಷಣ ಕೇಂದ್ರವು ಹಲವು ವರ್ಷಗಳಿಂದ ಬೇಸಿಗೆ ರಂಗ ತರಬೇತಿ ಶಿಬಿರವನ್ನು ನಡೆಸುತ್ತಿದೆ. ಈ ಶಿಬಿರವು ಪ್ರತಿ ವರ್ಷ ಮೇ ತಿಂಗಳಿನಲ್ಲಿ ನಡೆಯುತ್ತದೆ. ಈ ಶಿಬಿರವನ್ನು ಮುಖ್ಯವಾಗಿ ರಂಗಶಿಕ್ಷಣ ಕೇಂದ್ರದ ಅಧ್ಯಾಪಕರು ನಡೆಸುತ್ತಾರೆ. ಈ ಶಿಬಿರದಲ್ಲಿ ರಂಗಭೂಮಿಯ ವಿವಿಧ ಆಯಾಮಗಳ ಬಗ್ಗೆ ಕಲಿಸಲಾಗುತ್ತದೆ. ಜೊತೆಗೆ ಧ್ವನಿ, ಚಲನೆ ಮತ್ತು ವಿವಿಧ ವಿನ್ಯಾಸಗಳ ಬಗ್ಗೆ ಪ್ರಾಯೋಗಿಕ ತರಗತಿಗಳು ನಡೆಯುತ್ತವೆ. ಶಿಬಿರದುದ್ದಕ್ಕೂ ಕಲಿಕೆಯ ಭಾಗವಾಗಿ ಒಂದು ಕಿರು ರಂಗಪ್ರಯೋಗವನ್ನು ಕಲಿತು ಕಡೆಯ ದಿನ ಪ್ರದರ್ಶಿಸಲಾಗುತ್ತದೆ.