ನೀನಾಸಮ್

ಕಲೆಗಳ ಸಂಗಡ ಮಾತುಕತೆ

(ಅಕ್ಟೋಬರ್ ೨೦೨೩)

NINASAM

KALEGALA SANGADA MATUKATE

(Conversation with literature and other Arts) October 2023

ಕಳೆದ ಎರಡೂವರೆ ದಶಕಗಳಿಂದ ಪ್ರತಿವರ್ಷ ಚಲನಚಿತ್ರ-ಸಂಸ್ಕೃತಿ ಶಿಬಿರಗಳನ್ನು ನಡೆಸುತ್ತ ಬಂದಿರುವ ನೀನಾಸಮ್ ಕಳೆದ ವರ್ಷದಿಂದ ಅದರ ಪರಿಷ್ಕೃತ ರೂಪವಾದ `ಕಲೆಗಳ ಸಂಗಡ ಮಾತುಕತೆ’ ಎಂಬ ಕಾರ್ಯಕ್ರಮವನ್ನು ಸಂಘಟಿಸುತ್ತಿದೆ.

೨೦೨೩ ಅಕ್ಟೋಬರ್ ೨೧ ರಿಂದ ೨೫ ರವರೆಗೆ ಐದು ದಿನ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಹಿಂದೆ ನಡೆಯುತ್ತಿದ್ದ ಸಂಸ್ಕೃತಿ ಶಿಬಿರಕ್ಕಿಂತ ಭಿನ್ನವಾಗಿ, ನಿರ್ದಿಷ್ಟ ವಿಷಯಗಳನ್ನು ಕುರಿತ ಉಪನ್ಯಾಸ, ಗೋಷ್ಠಿ, ಸಂವಾದಗಳು ಇರುವುದಿಲ್ಲ.  ಬದಲು, ರಂಗಭೂಮಿ, ಸಾಹಿತ್ಯ, ಸಂಗೀತ, ಸಿನೆಮಾ, ಚಿತ್ರಕಲೆ ಮೊದಲಾದ ಕಲಾಪಠ್ಯಗಳ ಪ್ರಸ್ತುತಿ ಮತ್ತು ಅವನ್ನು ಕುರಿತ ಚರ್ಚೆಗಳು ಇರುತ್ತವೆ.  ಕಾರ್ಯಕ್ರಮವು ಗೋಷ್ಠಿಗಳ ರೂಪದಲ್ಲಿ ನಡೆಯದೆ ತರಗತಿಗಳ ಹಾಗೆ ನಡೆಯುತ್ತದೆ. ಐದೂ ದಿನ ಸಂಜೆ ತಿರುಗಾಟ ಮತ್ತು ನೀನಾಸಮ್ ನಾಟಕಗಳೂ ಸೇರಿದಂತೆ ಕಲಾ ಪ್ರಯೋಗಗಳ ಉತ್ಸವ ಸಾರ್ವಜನಿಕರಿಗೆ ತೆರೆದಿರುತ್ತದೆ.

ಈ ಮಾತುಕತೆಗೆ ಕರ್ನಾಟಕದ ಬೇರೆಬೇರೆ ಭಾಗಗಳ ಕಲಾಕಾರರು, ವಿದ್ವಾಂಸರು, ಲೇಖಕರು ಪ್ರದರ್ಶನಕಾರರಾಗಿಯೂ ಶಿಕ್ಷಕರಾಗಿಯೂ ಬರುತ್ತಾರೆ. ಸೀಮಿತ ಸಂಖ್ಯೆಯ ಅಭ್ಯರ್ಥಿಗಳನ್ನೂ ನೋಂದಾವಣೆ ಮಾಡಿಕೊಳ್ಳಲಾಗುತ್ತದೆ. ಅಭ್ಯರ್ಥಿಗಳು ಐದೂ ದಿನ ಪೂರ್ಣಾವಧಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಅಗತ್ಯ.

ಕಳೆದ ವರ್ಷದಂತೆಯೇ ನೀನಾಸಮ್ ವತಿಯಿಂದ ಅಭ್ಯರ್ಥಿಗಳಿಗೆ ವಸತಿ ವ್ಯವಸ್ಥೆ ಇರುವುದಿಲ್ಲ. ಅದನ್ನು ಅಭ್ಯರ್ಥಿಗಳೇ ಯೋಜಿಸಿಕೊಳ್ಳಬೇಕಾಗುತ್ತದೆ (ಈ ಬಗ್ಗೆ ಒಂದು ವಿಶೇಷ ವ್ಯವಸ್ಥೆ ಲಭ್ಯವಿದ್ದು, ಅದಕ್ಕೆ ಕೆಳಗಿರುವ ಟಿಪ್ಪಣಿ ನೋಡಿ). ನಿಗದಿತ ಊಟತಿಂಡಿ ವೆಚ್ಚ ಮತ್ತು ಕಾರ್ಯಕ್ರಮ ಶುಲ್ಕವನ್ನು ಕೊಟ್ಟು ಅಭ್ಯರ್ಥಿಗಳು ಸೇರಿಕೊಳ್ಳಬಹುದು.

 

Ninasam organizes `Conversation with Literature and other Arts 2023’, a different version of the Culture Course that has been annually held at Ninasam for the last two decades and more.

The five-day event, between 21st and 25th of October 2023, will be different from the earlier Culture Course in various ways. There will be no seminars or panel discussions on a given topic. Instead, there will be presentations and discussions about texts of different kinds—literature, theatre, music, folklore, visual arts, cinema etc. The program will emulate a class-room and not a conference. The day-program is for the registered participants and guests, however the evening theatre festival that includes Ninasam and Tirugata Plays along with invited performances will be open for the public.

Artists, scholars and writers from various parts of Karnataka will teach in this program. A limited number of participants will be admitted through application. Participants should attend all five days.

Unlike earlier events, Ninasam will not arrange accomodation for the participants. Participants have to arrange their accomodation by themselves (there is an option one can avail, of which the details are provided below). Participants will have to pay a fixed fee that will take care of their food and entrance tickets for the Theatre Festival.

ನೋಂದಾವಣೆಯ ವಿವರಗಳು:

 • ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಯಸುವ ಆಸಕ್ತರು ಈ ಕೆಳಗೆ ಕೊಟ್ಟಿರುವ ಕೊಂಡಿ ಬಳಸಿ ಆನ್-ಲೈನ್‌ನಲ್ಲಿ ನೋಂದಾವಣೆ ಮಾಡಿಕೊಳ್ಳಬಹುದು.
 • ಅಂಚೆ ಮೂಲಕ ನೋಂದಾಯಿಸಲು ಬಯಸುವವರು ಕೆಳಗೆ ಲಭ್ಯವಿರುವ ಅಭ್ಯರ್ಥಿಪತ್ರವನ್ನು ಡೌನ್‌ಲೋಡ್ ಮಾಡಿಕೊಂಡು ವಿವರಗಳನ್ನು ತುಂಬಿ ತಾ. ೩೦ ಸೆಪ್ಟೆಂಬರ್ ೨೦೨೩ರೊಳಗೆ ನಮಗೆ ತಲುಪುವಂತೆ ಕಳಿಸಬೇಕು.
 • ಆಯ್ಕೆಯಾದವರಿಗೆ ಅಕ್ಟೋಬರ್ ಮೊದಲ ವಾರ ಈಮೈಲ್ ಮೂಲಕ ಹೆಚ್ಚಿನ ವಿವರಗಳನ್ನು ಕೊಡಲಾಗುವುದು.
 • ಅಧ್ಯಯನದ ತರಗತಿಗಳ ಮಾದರಿಯಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಅಷ್ಟೂ ದಿನ ಭಾಗವಹಿಸುವುದು ಅಗತ್ಯ. ಭಾಗಶಃ ಪಾಲ್ಗೊಳ್ಳುವುದಕ್ಕೆ ಅವಕಾಶವಿಲ್ಲ.
 • ಕಾರ್ಯಕ್ರಮದ ಎಲ್ಲ ದಿನಗಳ ಊಟ-ತಿಂಡಿ ಮತ್ತು ಸಂಜೆಯ ಕಾರ್ಯಕ್ರಮಗಳಿಗೆ ಪ್ರವೇಶ ಸೇರಿ ಒಟ್ಟು ಶುಲ್ಕ ರೂ. ೪,೦೦೦ (ರೂಪಾಯಿ ನಾಲ್ಕು ಸಾವಿರ). ಇದರಲ್ಲಿ ವಸತಿ ವೆಚ್ಚ ಸೇರಿಲ್ಲ.
 • ಈ ಹಣವನ್ನು ನಮ್ಮಿಂದ ಸೂಚನೆ ಬಂದಮೇಲೆ ಕಳಿಸಬೇಕು. ಕಳಿಸುವ ವಿಧಾನಗಳನ್ನು ಈಮೇಲಿನಲ್ಲಿ ತಿಳಿಸಲಾಗುವುದು.

Guidelines for Registration:

 • Interested participants can register online for the event through the below given link.
 • Those who wish to register by sending an application through post, download the application given below. The filled application should reach us before 30 September 2023.
 • Chosen participants will receive an email with more details of the program during the first week of October.
 • Participants shall attend all the sessions over five days and there is no option of partial attendance.
 • The fees to be paid, for breakfast, lunch, snack and dinner along with the entrance tickets for the evening programmes, is Rs. 4000 (Rs. Four Thousand). Fees is excluding the accommodation.
 • This fee should be paid, after receiving an acceptance mail from us. Details regarding the mode of payment will be given in the email

ವಿಶೇಷ ವಸತಿ ವ್ಯವಸ್ಥೆ:

ಕಳೆದ ಕಾರ್ಯಕ್ರಮಗಳಲ್ಲಿದ್ದಂತೆ, ಅಭ್ಯರ್ಥಿಗಳ ವಸತಿಯ ವ್ಯವಸ್ಥೆಯನ್ನು ನೀನಾಸಮ್ ಮಾಡುವುದಿಲ್ಲ. ಹೆಗ್ಗೋಡಿನಿಂದ ೧೦ ಕಿಮಿ ದೂರದ ಸಾಗರದಲ್ಲಿ ಬೇರೆಬೇರೆ ದರದ ವಸತಿಗೃಹಗಳು ಲಭ್ಯ. ಅದಲ್ಲದೆ, ಈ ಕಾರ್ಯಕ್ರಮಕ್ಕಾಗಿಯೇ ಯೋಜಿಸಿದ ಒಂದು ವಿಶೇಷ ವ್ಯವಸ್ಥೆಯಲ್ಲಿ ಸಾಗರದ ವಸತಿಗೃಹವೊಂದರಲ್ಲಿ ಶೇರ್ಡ್ ರೂಮುಗಳು ಮತ್ತು ಪ್ರತಿದಿನ ಹೆಗ್ಗೋಡಿಗೆ ಹೋಗಿಬರಲು ವಾಹನ ವ್ಯವಸ್ಥೆ ಮಾಡಲಾಗಿದ್ದು, ಅದರ ಶುಲ್ಕ ಒಬ್ಬರಿಗೆ ೫ ದಿನಕ್ಕೆ ಒಟ್ಟು ರೂ. ೨,೭೫೦ (ರೂಪಾಯಿ ಎರಡು ಸಾವಿರದ ಏಳುನೂರಾ ಐವತ್ತು) ಆಗಿರುತ್ತದೆ. ಅಭ್ಯರ್ಥಿಗಳು ಇಚ್ಛಿಸಿದರೆ ಮಾತ್ರ ಬಳಸಬಹುದಾದ ಈ ವ್ಯವಸ್ಥೆಯ ವಿವರಗಳನ್ನು ಆಯ್ಕೆಯಾದ ಅಭ್ಯರ್ಥಿಗಳಿಗೆ ಈಮೇಲ್‌ನಲ್ಲಿ ತಿಳಿಸಲಾಗುತ್ತದೆ.

Special Arrangement for Accommodation:

Unlike earlier events, Ninasam will not provide accommodation for the participants. However, there are various lodges, with varied costs, available at Sagara, 10 kms away from Heggodu. Alongside this, there is an optional arrangement for the participants, organized specially for this program. One can avail shared accommodation and transport between the guest-house at Sagar and Heggodu at a price of Rs.2750 (Rs. Two Thousand Seven Hundred Fifty) per person for five days. The details of this will be provided to the selected participants over the acceptance email.

ಹಗಲಿನ ಕಾರ್ಯಕ್ರಮಗಳು (ಅಭ್ಯರ್ಥಿಗಳಿಗೆ ಮಾತ್ರ):

ನಾಟಕವೀಕ್ಷಣೆ ಮತ್ತು ಚರ್ಚೆ, ಹಿಂದುಸ್ತಾನಿ ಸಂಗೀತ ಪ್ರಸ್ತುತಿ ಮತ್ತು ಚರ್ಚೆ, ಜಾನಪದ ಕಲಾಪ್ರಸ್ತುತಿ ಮತ್ತು ಚರ್ಚೆ, ಕಾವ್ಯ ಸಾಹಿತ್ಯ ಹಾಗೂ ರಾಜಕೀಯ ಕೃತಿಗಳ ಪ್ರಸ್ತುತಿ ಮತ್ತು ಚರ್ಚೆ, ಯಾಂತ್ರಿಕ ಬುದ್ಧಿಮತ್ತೆಯ ಪಠ್ಯಗಳನ್ನು ಕುರಿತ ಚರ್ಚೆ, ಚಲನಚಿತ್ರ ಪ್ರದರ್ಶನ ಮತ್ತು ಚರ್ಚೆ, ಕೂಡಿಯಾಟ್ಟಂ ಪ್ರದರ್ಶನ ಮತ್ತು ಚರ್ಚೆ ಇತ್ಯಾದಿ.  ಈ ಪ್ರಸ್ತುತಿ ಮತ್ತು ಚರ್ಚೆಗಳಲ್ಲಿ ಪಾಲ್ಗೊಳ್ಳುವ ಅತಿಥಿಗಳು ಮತ್ತು ತಂಡಗಳು: ಟಿ.ಪಿ. ಅಶೋಕ, ಜಸವಂತ ಜಾಧವ್, ಸಚ್ಚಿದಾನಂದನ್ ಕೆ., ಅಬ್ದುಲ್ ರಷೀದ್, ಸಂಗನಬಸವ ಶಿವಯೋಗಿ ಹರದೇಶಿ ತಂಡ – ದುರ್ಗಾದೇವಿ ನಾಗೇಶಿ ತಂಡ ಅಥಣಿ, ರಮೇಶ ಎಸ್ ಕತ್ತಿ, ಕೆ.ಜಿ. ಕೃಷ್ಣಮೂರ್ತಿ, ಜಯಂತ ಕಾಯ್ಕಿಣಿ, ಎಂ.ಜಿ. ಹೆಗಡೆ, ಪ್ರಿಯಾ ಪುರುಷೋತ್ತಮ, ಎಚ್.ಕೆ. ಶ್ವೇತಾರಾಣಿ, ಪ್ರಶಾಂತ ಪಂಡಿತ, ಕೃಷ್ಣಮೂರ್ತಿ ಹನೂರು, ತಮಿಳು ಸೆಲ್ವಿ, ಸುಂದರ್ ಸರುಕ್ಕೈ, ಕಪಿಲಾ ವೇಣು, ಕೆ.ಪಿ. ಲಕ್ಷ್ಮಣ, ವಿವೇಕ ಶಾನಭಾಗ, ಮಧುಸೂದನ ವೈ.ಎನ್. ನಿತ್ಯಾನಂದ ಬಿ ಶೆಟ್ಟಿ, ಅಮರ್ ಬಿ., ಮಾಧವ ಚಿಪ್ಪಳಿ, ಬಿ.ಆರ್. ವೆಂಕಟರಮಣ ಐತಾಳ, ಬಿ.ಟಿ. ಜಾಹ್ನವಿ, ವಿದ್ಯಾ ಹೆಗಡೆ ಮೊದಲಾದವರು.

Broad Outline of the day Program:

Performances and presentations of various kinds like Theatre, Hindustani Music, Folk, Poetic, Political and Literary works will follow with discussions and classes. Guests and teams who perform and teach include T.P. Ashoka, Jaswanth Jadhav, Sachidanandan K., Abdul Rasheed, Sanganabasava Shivayogi Hardeshi Troupe – Durgadevi Nageshi Troupe Athani, Ramesh S. Katti, K.G. Krishnamurthy, Jayant Kaikini, M.G. Hegde, Priya Purushottam, H.K. Shwetarani, Prashant Pandit, Krishnamurthy Hanur, Tamil Selvi, Sundar Sarukkai, Kapila Venu, K.P. Laxmana, Vivek Shanbhag, Madhusudan Y.N., Nityananda B. Shetty, Amar B., Madhava Chippali, B.R. Venkataramana Aithal, B.T. Jahnavi, Vidya Hegde and others.

ಸಂಜೆಯ ಕಾರ್ಯಕ್ರಮಗಳು (೭ ರಿಂದ – ಸಾರ್ವಜನಿಕರಿಗೆ):

೨೧ ಅಕ್ಟೋಬರ್ – ತಿರುಗಾಟ ನಾಟಕ – ಹುಲಿಯ ನೆರಳು (ನಿ: ಕೆ.ಜಿ. ಕೃಷ್ಣಮೂರ್ತಿ); ೨೨ ಅಕ್ಟೋಬರ್ – ತಿರುಗಾಟ ನಾಟಕ – ಆ ಲಯ ಈ ಲಯ (ನಿ: ಎಚ್.ಕೆ. ಶ್ವೇತಾರಾಣಿ), ೨೩ ಅಕ್ಟೋಬರ್ – ನೀನಾಸಮ್ ನಾಟಕ – ರಕ್ತಾಕ್ಷಿ (ನಿ: ಬಿ.ಆರ್. ವೆಂಕಟರಮಣ ಐತಾಳ), ೨೪ ಅಕ್ಟೋಬರ್ – ಆಹ್ವಾನಿತ ನಾಟಕ – ದಕ್ಲಕಥಾ ದೇವಿಕಾವ್ಯ (ನಿ: ಕೆ.ಪಿ. ಲಕ್ಷ್ಮಣ), ೨೫ ಅಕ್ಟೋಬರ್ – ಆಹ್ವಾನಿತ ನಾಟಕ – ಸೇಮ್ ಸೇಮ್ ಬಟ್ ಡಿಫರೆಂಟ್ (ನಿ: ಸಪನ್ ಶರಣ್).

Detail of the Evening Program:

Oct 21: Tirugata Play – Huliya Neralu (Dir: K.G. Krishnamurthy), Oct 22: Tirugata Play – Aa Laya Ee Laya (Dir: H.K. Shwetarani), Oct 23: Ninasam Play – Raktakshi (Dir: B.R. Venkataramana Aithal), Oct 24: Invited Play – Daklakatha DeviKavya (Dir: K.P. Laxmana), Oct 25: Invited Play – Same Same But Different (Dir: Sapan Saran).

This workshop is intended primarily for cultural enthusiasts from rural and semi urban parts of Karnataka.  But it is open to anyone who has a general interest in cultural activities. Most of the sessions and performances in the workshop will be in Kannada, and therefore, those who cannot understand Kannada will have a disadvantage.

ನೊಂದಾವಣೆ  ಕೊನೆಯ ದಿನಾಂಕ ಮುಗಿದಿದೆ

Registration Closed

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ (ಬೆಳಿಗ್ಗೆ 10ರಿಂದ ರಾತ್ರಿ 8):

ವಾಟ್ಸ್ಯಾಪ್: 8183295646
ಶ್ರೀಕಾಂತ: 94493-37250

ವಿಳಾಸ : ನೀನಾಸಮ್, ಹೆಗ್ಗೋಡು, ಸಾಗರ ಕರ್ನಾಟಕ 577 417
ಈಮೇಲ್: [email protected]

For More information: (10am to 8pm):

WhatsApp: 8183295646
Srikanth: 94493-37250

Contact address: Ninasam, Heggodu, Sagara Shimoga – 577 417,
Email: [email protected]