Fellowship
ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ಅಭ್ಯಾಸ ಮಾಡಿದ ಯುವ ರಂಗಕರ್ಮಿಗಳಿಗೆ ಫೆಲೋಷಿಪ್
ನೀನಾಸಮ್ ರಂಗಶಿಕ್ಷಣಕೇಂದ್ರದಿಂದ ಇದುವರೆಗೆ ೬೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತರಬೇತಿಗೊಳಿಸಿದ್ದು ಇವರಲ್ಲಿ ಬಹುಪಾಲು ಜನರು ರಂಗಭೂಮಿ ಮತ್ತು ಬೇರೆ ಮಾಧ್ಯಮಗಳಲ್ಲಿ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ಹೊಸ ಪ್ರತಿಭೆಗಳನ್ನು ಗುರುತಿಸಿ ಅವರು ಕೈಗೊಳ್ಳಲು ಬಯಸಿರುವ ನಿರ್ದಿಷ್ಟ ಕಾರ್ಯಯೋಜನೆಯೊಂದಕ್ಕೆ ಧನಸಹಾಯ ನೀಡುವುದು ಈ ಫೆಲೋಷಿಪ್‌ನ ಉದ್ದೇಶ. ಕನ್ನಡ ರಂಗಭೂಮಿಯಲ್ಲಿ ವೃತ್ತಿಪರತೆಯನ್ನು ಸಾಧಿಸಲು ಪ್ರಯತ್ನಿಸುತ್ತಿರುವ ಯುವ ಪ್ರತಿಭೆಗಳಿಗೆ ಸಹಾಯ ಮಾಡುವ ಮೂಲಕ ರಂಗಭೂಮಿಯಲ್ಲಿ ಹೊಸಬರಿಗೆ ಪ್ರೋತ್ಸಾಹ ನೀಡುವುದು – ಈ ಫೆಲೋಷಿಪ್‌ನ ವಿಶಾಲ ಗುರಿ.
ನೀನಾಸಮ್ ಪ್ರತಿಷ್ಠಾನವು ಬಿ.ಸಿ.ಎಸ್. ಅಯ್ಯಂಗಾರ್ ಫೆಲೋಷಿಪ್ ೨೦೨೨ ಮತ್ತು ಪ್ರಮೀಳಾ ಸ್ವಾಮಿ ಫೆಲೋಷಿಪ್ ೨೦೨೨ಗಳನ್ನು ಈ ಮೂವರಿಗೆ ನೀಡಲು ನಿರ್ಧರಿಸಿದೆ:
೧. ಶ್ವೇತ ಶ್ರೀನಿವಾಸ, ಬೆಂಗಳೂರು (ಪ್ರಮೀಳಾ ಸ್ವಾಮಿ ಫೆಲೋಷಿಪ್ ೨೦೨೨)
೨. ಸೈಯದ್ ಸಾದಿಕ್ ಎಸ್. ರಿಯಾಜ್, ಹೊಸಪೇಟೆ (ಬಿ.ಸಿ.ಎಸ್. ಅಯ್ಯಂಗಾರ್ ಫೆಲೋಷಿಪ್ ೨೦೨೨)
೩. ಸಂತೋಷ್ ಕುಮಾರ್ ಮಳ್ಳಿ, ಗದಗ (ಬಿ.ಸಿ.ಎಸ್. ಅಯ್ಯಂಗಾರ್ ಫೆಲೋಷಿಪ್ ೨೦೨೨)
ಪ್ರತಿ ಫೆಲೋಷಿಪ್‌ನ ಮೊತ್ತ ರೂ. ೫೦,೦೦೦
ಫೆಲೋಷಿಪ್‌ನ ವಿವರಗಳು:
- ‘ಬಿ.ಸಿ.ಎಸ್. ಅಯ್ಯಂಗಾರ್ ಫೆಲೋಷಿಪ್’ ಮತ್ತು `ಪ್ರಮೀಳಾ ಸ್ವಾಮಿ ಫೆಲೋಷಿಪ್‘ ಎಂಬ ಹೆಸರುಗಳಲ್ಲಿ ಈ ಸಹಾಯವನ್ನು ನೀಡಲಾಗುತ್ತದೆ.
- ನೀನಾಸಮ್ ಸಂಸ್ಥೆಯ ಹಿತೈಷಿಗಳಾದ ಶ್ರೀ. ಬಿ.ಸಿ.ಎಸ್. ಅಯ್ಯಂಗಾರ್ ಮತ್ತು ಶ್ರೀಮತಿ ದೀಪಾ ಗಣೇಶ್ ಅವರು ಕ್ರಮವಾಗಿ ಈ ಎರಡು ಯೋಜನೆಗಳ ಪ್ರೇರಕರಾಗಿದ್ದು ಅವರು ಇದರ ಆರ್ಥಿಕ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಉಳಿದಂತೆ, ಈ ಫೆಲೋಷಿಪ್‌ಗಳ ಪ್ರಕಟಣೆ, ಪ್ರಚಾರ, ಆಯ್ಕೆ, ನಿರ್ವಹಣೆ ಮತ್ತು ಮೌಲ್ಯಮಾಪನಗಳೆಲ್ಲದರ ಕಾರ್ಯಗಳನ್ನು ನೀನಾಸಮ್ ಪ್ರತಿಷ್ಠಾನವು ನಿರ್ವಹಿಸುತ್ತದೆ.
- ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ಉತ್ತೀರ್ಣರಾದ ಮತ್ತು ೨೦೨೨ ಆಗಸ್ಟ್ ತಿಂಗಳಿಗೆ ೪೦ ವರ್ಷ ವಯಸ್ಸು ಮೀರಿರದ ಯಾರೂ ಈ ಫೆಲೋಷಿಪ್‌ಗೆ ಬೇಡಿಕೆ ಸಲ್ಲಿಸಬಹುದು. ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ತರಬೇತಿ ಪಡೆಯದವರಿಗೆ ಈ ಫೆಲೋಷಿಪ್ ನೀಡಲಾಗುವುದಿಲ್ಲ.
- ಆಯಾ ರಂಗಕರ್ಮಿಯು ಮಾಡಬೇಕೆಂದು ಬಯಸಿರುವ ನಿರ್ದಿಷ್ಟ ಕಾರ್ಯಕ್ರಮ ಯೋಜನೆಯೊಂದಕ್ಕೆ ಸಹಾಯವಾಗುವಂತೆ, ಆಯಾ ವಿದ್ಯಾರ್ಥಿಗೆ ಈ ಫೆಲೋಷಿಪ್‌ನ್ನು ನೀಡಲಾಗುತ್ತದೆ. ಹಾಗೆ ಸೂಚಿಸುವ ನಿರ್ದಿಷ್ಟ ಕಾರ್ಯಕ್ರಮವು ಕನಿಷ್ಠ ೧ ತಿಂಗಳು ಅಥವಾ ಗರಿಷ್ಠ ೩ ತಿಂಗಳ ಒಳಗೆ ಪೂರೈಸುವಂಥದಾಗಿರಬೇಕು.
- ‘ಬಿ.ಸಿ.ಎಸ್. ಅಯ್ಯಂಗಾರ್ ಫೆಲೋಷಿಪ್’ನ್ನು ಯಾವುದೇ ಹಳೆಯ ವಿದ್ಯಾರ್ಥಿಗೂ ಮತ್ತು `ಪ್ರಮೀಳಾ ಸ್ವಾಮಿ ಫೆಲೋಷಿಪ್‘ನ್ನು ಮಹಿಳಾ ಅಭ್ಯರ್ಥಿಗೂ ನೀಡಲಾಗುತ್ತದೆ.
- ಅರ್ಹ ಕಾರ್ಯಯೋಜನೆಗಳ ಒಂದು ಸೂಚಕ ಪಟ್ಟಿ ಹೀಗಿದೆ:
- ಹೊಸ ನಾಟಕ ಪ್ರಯೋಗವೊಂದನ್ನು ವಿಶೇಷ ತರಬೇತಿಯೊಂದಿಗೆ ಪ್ರದರ್ಶನಕ್ಕೆ ಸಿದ್ಧಪಡಿಸುವುದು
- ಅಪರೂಪದ ರಂಗತರಬೇತಿ ಶಿಬಿರವೊಂದನ್ನು ನಡೆಸುವುದು
- ರಂಗಾಧ್ಯಯನದ ಉದ್ದೇಶದಿಂದ ಕರ್ನಾಟಕ ಅಥವಾ ಹೊರಗಿನ ತಂಡ ಅಥವಾ ತಜ್ಞರಿಂದ ತರಬೇತಿ ಪಡೆಯುವುದು
- ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಕ್ಕೆ ಅಧ್ಯಯನೋದ್ದೇಶದ ಪ್ರವಾಸ ಮಾಡುವುದು
- ರಂಗಕರ್ಮಕ್ಕೆ ಸಂಬಂಧಿಸಿ ಸಂಶೋಧನೆ-ದಾಖಲಾತಿ-ಬರವಣಿಗೆ ನಡೆಸುವುದು
- ರಂಗಭೂಮಿ ಮತ್ತು ಬೇರೆ ಕಲೆಗಳ ಸಹಯೋಗವುಳ್ಳ ಪ್ರಯೋಗಗಳಲ್ಲಿ ತೊಡಗಿಕೊಳ್ಳುವುದು
- ಇವುಗಳಲ್ಲದೆ, ರಂಗಭೂಮಿಯ ಆವಿಷ್ಕಾರ-ಅನುಭವವನ್ನು ವಿಸ್ತರಿಸುವ ಯಾವುದೇ ಹೊಸ ಯೋಜನೆಯೂ ಅರ್ಹ.
- ಆಯಾ ಯೋಜನೆಗಳ ಕೆಲಸದ ಸ್ವರೂಪ ಮತ್ತು ಸಮಯವ್ಯಾಪ್ತಿಯನ್ನು ಆಧರಿಸಿ ಕನಿಷ್ಠ ೧ ತಿಂಗಳು ಮತ್ತು ಗರಿಷ್ಠ ೩ ತಿಂಗಳ ನಡುವೆ ಈ ಕಾರ್ಯಯೋಜನೆಯು ಮುಗಿಯಬೇಕು. ಪ್ರತಿವರ್ಷವೂ ರೂ. ೫೦,೦೦೦ ಮೊತ್ತವನ್ನು ಒಳಗೊಂಡ ಎರಡು-ಮೂರು ಫೆಲೋಷಿಪ್ ನೀಡಲಾಗುತ್ತದೆ.
ಫೆಲೋಷಿಪ್‌ಗೆ ಬೇಡಿಕೆ ಸಲ್ಲಿಸುವ ಕ್ರಮ:
- ಆಗಸ್ಟ್ ತಿಂಗಳಲ್ಲಿ ಈ ಫೆಲೋಷಿಪ್‌ನ ಪ್ರಕಟಣೆ ನೀಡಲಾಗುತ್ತದೆ. ನೀನಾಸಮ್ ಅಂತರ್ಜಾಲದ ತಾಣದಲ್ಲಿ ಮತ್ತು ಬೇರೆ ಮಾಧ್ಯಮಗಳಲ್ಲಿ ಇದಕ್ಕೆ ಪ್ರಚಾರ ಕೊಡಲಾಗುತ್ತದೆ.
- ನೀನಾಸಮ್ ರಂಗಶಿಕ್ಷಣಕೇಂದ್ರದಲ್ಲಿ ಉತ್ತೀರ್ಣರಾದ ಮತ್ತು ೨೦೨೨ ಆಗಸ್ಟ್ ತಿಂಗಳಿಗೆ ೪೦ ವರ್ಷ ವಯಸ್ಸು ಮೀರಿರದ ಯಾರೂ ಈ ಫೆಲೋಷಿಪ್‌ಗೆ ಬೇಡಿಕೆ ಸಲ್ಲಿಸಬಹುದು.
- ಬೇಡಿಕೆ ಪತ್ರವನ್ನು ಖಾಲಿ ಕಾಗದದ ಮೇಲೆ ಈ ಕೆಳಕಂಡ ವಿವರಗಳೊಂದಿಗೆ ಅಂಚೆಯಲ್ಲಿ ಅಥವಾ ಈ-ಮೈಲ್ ಮೂಲಕ ಸಲ್ಲಿಸಬಹುದು:
- ಬೇಡಿಕೆ ಸಲ್ಲಿಸುತ್ತಿರುವವರ ಹೆಸರು, ಪೂರ್ಣ ವಿಳಾಸ, ಚರ ದೂರವಾಣಿ ಸಂಖ್ಯೆ ಮತ್ತು ಈ-ಮೈಲ್ ವಿಳಾಸ
- ಲಿಂಗ, ಹುಟ್ಟಿದ ದಿನಾಂಕ ಮತ್ತು ವಯಸ್ಸು
- ಪ್ರಸ್ತುತ ಉದ್ಯೋಗ ಮತ್ತು ವೃತ್ತಿ
- ನೀನಾಸಮ್ ರಂಗಶಿಕ್ಷಣಕೇಂದ್ರದ ತರಬೇತಿಯ ಅನಂತರ ಮಾಡಿರುವ ಪ್ರಮುಖ ಕೆಲಸಗಳು ಮತ್ತು ಪಡೆದ ಮನ್ನಣೆಗಳು (೧ ಪುಟ)
- ಫೆಲೋಷಿಪ್‌ಗೆ ಬೇಡಿಕೆ ಸಲ್ಲಿಸುತ್ತಿರುವ ನಿರ್ದಿಷ್ಟ ಕಾರ್ಯಯೋಜನೆಯ ವಿವರಗಳು: ರೂಪುರೇಷೆ, ಹಿನ್ನೆಲೆ, ಉದ್ದೇಶ, ಕಾರ್ಯಕ್ರಮದ ವಿವರಗಳು ಮತ್ತು ಕಾಲಾವಧಿ, ಎಲ್ಲಿ ಯಾವಾಗ ಯಾರೊಂದಿಗೆ ಹೇಗೆ ಕೆಲಸ ಮಾಡಲು ಉದ್ದೇಶಿಸಿದ್ದೀರಿ ಇತ್ಯಾದಿ ವಿವರಗಳು, ಮತ್ತು ಈ ಕಾರ್ಯಯೋಜನೆಯಿಂದ ನಿಮಗೆ ಮತ್ತು ವಿಶಾಲ ರಂಗಭೂಮಿಗೆ ಏನೆಲ್ಲ ಅನುಕೂಲಗಳಾಗಬಹುದು ಎಂಬುದರ ಸೂಚನೆ ಇತ್ಯಾದಿ (೨-೩ ಪುಟ)
- ಕಾರ್ಯಯೋಜನೆಯ ಆಯವ್ಯಯ ಅಂದಾಜು. ಬೇರೆ ಸಹಾಯಮೂಲಗಳಿದ್ದರೆ ಅದನ್ನೂ ನಮೂದಿಸಿ.
- ನೀನಾಸಮ್ ರಂಗಶಿಕ್ಷಣಕೇಂದ್ರದಲ್ಲಿ ಓದಿದ್ದಕ್ಕೆ ಅಂಕಪಟ್ಟಿ, ಪ್ರಮಾಣಪತ್ರದಂಥ ಒಂದು ದಾಖಲೆಯ ಛಾಯಾಪ್ರತಿ.
- ಬೇಡಿಕೆಯನ್ನು ನಮಗೆ ತಲುಪಿಸುವ ಕಡೆಯ ದಿನಾಂಕ ಮುಗಿದಿದೆ.
ನಿರ್ವಹಣೆಯ ವಿವರಗಳು:
- ನೀನಾಸಮ್ ಪ್ರತಿಷ್ಠಾನದ ಒಬ್ಬರು, ನೀನಾಸಮ್ ರಂಗಶಿಕ್ಷಣಕೇಂದ್ರದ ಮುಖ್ಯಸ್ಥರು ಮತ್ತು ಹೊರಗಿನ ತಜ್ಞರು ಕೂಡಿರುವ ಒಂದು ಆಯ್ಕೆ ಸಮಿತಿಯು ಎಲ್ಲ ಬೇಡಿಕೆಗಳನ್ನೂ ಕಾರ್ಯಯೋಜನೆಗಳನ್ನೂ ಪರಿಶೀಲಿಸಿ ಯಾರಿಗೆ ಫೆಲೋಷಿಪ್ ನೀಡಬಹುದೆಂದು ನಿರ್ಧರಿಸುತ್ತದೆ.
- ಅಗತ್ಯವಿದ್ದರೆ ಈ ಸಮಿತಿಯ ಸದಸ್ಯರು ದೂರವಾಣಿ ಮೂಲಕ ಅಥವಾ ಮೌಖಿಕವಾಗಿ ಆಯಾ ಬೇಡಿಕೆದಾರರಿಂದ ಹೆಚ್ಚಿನ ಮಾಹಿತಿ ಮತ್ತು ಸ್ಪಷ್ಟೀಕರಣ ಪಡೆಯುತ್ತಾರೆ.
- ನವೆಂಬರ್ ೨೦೨೨ರಲ್ಲಿ ತೀರ್ಮಾನಗಳನ್ನು ಪ್ರಕಟಗೊಳಿಸಿ ತಿಳಿಸಲಾಗುತ್ತದೆ. ಅದೇ ತಿಂಗಳ ಕೊನೆಯೊಳಗೆ ಒಂದೇ ಕಂತಿನಲ್ಲಿ ರೂ. ೫೦,೦೦೦ ಮೊತ್ತವನ್ನು ಆಯ್ಕೆಯಾದ ವ್ಯಕ್ತಿಯ ಬ್ಯಾಂಕ್ ಖಾತೆಗೆ ಕಳಿಸಲಾಗುತ್ತದೆ.
- ೧ ರಿಂದ ೩ ತಿಂಗಳುಗಳ ನಡುವಿನ ಒಪ್ಪಿತ ಅವಧಿಯು ಮುಗಿದ ೩೦ ದಿನಗಳೊಳಗೆ ಫೆಲೋಷಿಪ್ ಪಡೆದವರು ೩-೪ ಪುಟಗಳ ಒಂದು ವರದಿಯನ್ನೂ ಫೋಟೋ-ಬ್ರೋಷರ್ ಇತ್ಯಾದಿ ಕೆಲವು ದಾಖಲೆಗಳನ್ನೂ ಸಲ್ಲಿಸಬೇಕು. ಖರ್ಚುವೆಚ್ಚದ ಲೆಕ್ಕಗಳನ್ನೂ ಬಳಕೆ ಪ್ರಮಾಣಪತ್ರವನ್ನೂ ನೀಡಬೇಕಾದ ಅಗತ್ಯ ಇಲ್ಲ.
- ಫೆಲೋಷಿಪ್ ಸಹಾಯದಿಂದ ನಡೆದ ಕಾರ್ಯಕ್ರಮಗಳ ಪ್ರಕಟಣೆಯಲ್ಲಿ ಈ ಸಹಾಯವನ್ನು ಉಲ್ಲೇಖಿಸುವುದು ಅಗತ್ಯ.
Fellowship for Young Theatre Practitioners Trained at the Ninasam Theatre Training Centre
The Ninasam Theatre Training Centre has trained more than 650 students so far. Many of them are actively engaged in theatre and other media. The objective of this fellowship is to identify promising talent among these alumni and provide financial support for a specific project they wish to undertake. The broader aim of the fellowship is to encourage young theatre practitioners striving for professionalism in Kannada theatre and to support new creative initiatives in the field.
Fellowship Awards – 2022
Ninasam Pratishtana has decided to award the BCS Iyengar Fellowship 2022 and the Prameela Swamy Fellowship 2022 to the following recipients:
- Shwetha Srinivasa, Bangalore – Prameela Swamy Fellowship 2022
- Syed Sadiq S. Riyaz, Hospet – BCS Iyengar Fellowship 2022
- Santoshkumar Malli, Gadag – BCS Iyengar Fellowship 2022
Each fellowship carries a grant of ₹50,000.
Details of the Fellowship
The financial assistance is offered under the names “BCS Iyengar Fellowship” and “Prameela Swamy Fellowship.”
These fellowships are supported by the well-wishers of Ninasam, Sri B.C.S. Iyengar and Smt. Deepa Ganesh, who sponsor these initiatives. The announcement, promotion, selection, administration, and evaluation of the fellowships are handled by Ninasam Pratishtana.
Eligibility:
- Applicants must be graduates of the Ninasam Theatre Training Centre.
- Applicants must not exceed 40 years of age as of August 2022.
- Those who have not undergone training at the Ninasam Theatre Training Centre are not eligible.
The fellowship is awarded to support a specific theatre-related project proposed by the applicant. The proposed project must be designed to be completed within a minimum of 1 month and a maximum of 3 months.
- The BCS Iyengar Fellowship may be awarded to any alumnus.
- The Prameela Swamy Fellowship is awarded specifically to a female candidate.
Indicative List of Eligible Projects
Examples of projects that may qualify for the fellowship include:
- Preparing and staging a new theatre production with specialized training
- Conducting a rare or specialized theatre workshop
- Undertaking training with a theatre group or expert, within Karnataka or elsewhere, for theatre study
- Undertaking a study tour to participate in a special theatre-related programme
- Conducting research, documentation, or writing related to theatre
- Engaging in experimental collaborations between theatre and other art forms
Any innovative project that expands theatrical experience and creativity will also be considered eligible.
The duration of the project must be between 1 and 3 months depending on the nature of the work. Every year two or three fellowships of ₹50,000 each are awarded.
Application Procedure
The fellowship announcement is usually made in August and is publicized on the Ninasam website and other media platforms.
Eligibility:
- Applicants must have graduated from the Ninasam Theatre Training Centre.
- Applicants must be below 40 years of age as of August 2022.
Applications may be submitted by post or email on plain paper including the following details:
- Name, full address, mobile number, and email address
- Gender, date of birth, and age
- Current occupation/profession
- Major works and recognitions received after completing training at the Ninasam Theatre Training Centre (1 page)
- Detailed description of the proposed project (2–3 pages) including:
- Outline and background
- Objectives
- Programme details and duration
- Where, when, and with whom the work will be carried out
- Expected benefits for the applicant and the wider theatre community
Estimated budget of the project and any additional sources of support
A photocopy of a certificate or mark sheet confirming training at the Ninasam Theatre Training Centre
The deadline for submitting applications has now passed.
Selection and Administration
A selection committee consisting of:
- A representative of Ninasam Pratishtana
- The Head of the Ninasam Theatre Training Centre
- An external expert
will review all applications and project proposals to decide the fellowship recipients.
If necessary, the committee may contact applicants by phone or through an interview to obtain further clarification.
The decisions were announced in November 2022. The fellowship amount of ₹50,000 was transferred in a single installment to the selected candidates’ bank accounts before the end of the same month.
After completing the project within the agreed duration (1–3 months), fellowship recipients must submit within 30 days:
A 3–4 page report
Supporting documents such as photographs, brochures, or related material
Submission of detailed expenditure accounts or utilization certificates is not required.
However, all publications or announcements related to the project must acknowledge the fellowship support.
