Diploma In Theatre Arts
ಡಿಪ್ಲೊಮಾ ಇನ್ ಥಿಯೇಟರ್ ಆರ್ಟ್ಸ್
೨೦೨೬-೨೭ನೇ ಸಾಲಿನ ಪ್ರವೇಶ ಪ್ರಕ್ರಿಯೆ ಮುಕ್ತಾಯಗೊಂಡಿದೆ
ಕರ್ನಾಟಕ ರಾಜ್ಯ ಸರ್ಕಾರದ ಮಾನ್ಯತೆ ಪಡೆದಿರುವ ನೀನಾಸಮ್ ರಂಗಶಿಕ್ಷಣ ಕೇಂದ್ರ 2026-27ನೇ ಸಾಲಿನ ಶಿಕ್ಷಣಕ್ಕೆ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುತ್ತದೆ. ಪ್ರವೇಶಕ್ಕೆ ಕನಿಷ್ಠ ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ. ಇರಬೇಕು. ಪದವೀಧರರಿಗೆ ಆದ್ಯತೆ ಇರುತ್ತದೆ. ರಂಗಭೂಮಿಯಲ್ಲಿ ಆಸಕ್ತಿಯಿದ್ದು, ಸ್ವಲ್ಪಮಟ್ಟಿನ ಅನುಭವ ಇರಬೇಕಾದ್ದು ಅಗತ್ಯ. ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಊಟ, ವಸತಿ ವ್ಯವಸ್ಥೆಯ ಬಾಬ್ತು ಭಾಗಶಃ ವಿದ್ಯಾರ್ಥಿವೇತನ ದೊರೆಯುತ್ತದೆ. ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ರಂಗಕಲ್ಪನೆ, ರಂಗ ಇತಿಹಾಸ, ನಾಟಕ ಇತಿಹಾಸ, ರಂಗನಟನೆ, ರಂಗಸಿದ್ಧತೆ, ರಂಗವ್ಯವಸ್ಥೆ ಮುಂತಾಗಿ ವಿಸ್ತಾರವಾದ ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ಶಿಕ್ಷಣ ನೀಡಲಾಗುತ್ತದೆ. ಕೇಂದ್ರದ ನುರಿತ ಅಧ್ಯಾಪಕರುಗಳಲ್ಲದೆ ಹೊರಗಿನ ತಜ್ಞರನ್ನು ಕರೆಸಿ ಸಾಕಷ್ಟು ಪ್ರಬುದ್ಧ ಶಿಕ್ಷಣ ಕೊಡಲಾಗುತ್ತದೆ. ಒಳ್ಳೆಯ ಗ್ರಂಥ ಭಂಡಾರ ಹಾಗೂ ದೃಶ್ಯಶ್ರವ್ಯ ಪರಿಕರಗಳ ಅನುಕೂಲತೆಯಿದೆ. ವಿದ್ಯಾರ್ಥಿ ವಿದ್ಯಾರ್ಥಿನಿಯರು ಪ್ರತಿದಿನ ಸುಮಾರು 12 (07.00 am- 09.30 pm) ಗಂಟೆಗಳಷ್ಟು ಕಾಲ ಅಭ್ಯಾಸದಲ್ಲಿ ತೊಡಗಿರಬೇಕಾಗುತ್ತದೆ.
ಡಿಪ್ಲೊಮಾ ಇನ್ ಥಿಯೇಟರ್ ಆರ್ಟ್ಸ್: 2026-27
ಪ್ರವೇಶ ಕೋರಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಸೂಚನೆಗಳು
ನೀನಾಸಮ್ ರಂಗಶಿಕ್ಷಣ ಕೇಂದ್ರದ 2026-27ನೆಯ ವರ್ಷಕ್ಕೆ ಪ್ರವೇಶ ಬಯಸಿ ಅರ್ಜಿ ಸಲ್ಲಿಸುತ್ತಿರುವ ಅಭ್ಯರ್ಥಿಗಳು ಅರ್ಜಿ ತುಂಬುವಾಗ ಮತ್ತು ಆಮೇಲಿನ ಸಂದರ್ಶನದಲ್ಲಿ ಭಾಗವಹಿಸುವಾಗ ಗಮನಿಸಲೇಬೇಕಾದ ಕೆಲವು ಮುಖ್ಯ ಸೂಚನೆಗಳು ಇಲ್ಲಿವೆ.
1. ತರಬೇತಿಯ ಸಾಮಾನ್ಯ ನಿಯಮಗಳು:
- ರಂಗಶಿಕ್ಷಣ ಕೇಂದ್ರದ ಪರಿಚಯ ಪತ್ರದಲ್ಲಿ ಸೂಚಿಸಿದ ಎಲ್ಲಾ ನಿಯಮಕ್ಕೆ ಹಾಗೂ ಶಿಸ್ತಿಗೆ ಬದ್ಧರಾಗಿರಲು ಸಾಧ್ಯ ಎಂಬುದನ್ನು ನೀವು ದೃಢಪಡಿಸಿಕೊಳ್ಳಬೇಕು. ಮತ್ತು ಈ ಊರಿನ ಹವಾಮಾನ, ಊಟ ತಿಂಡಿ ಹಾಗೂ ವಸತಿಯ ಅನುಕೂಲತೆಗಳಿಗೆ ನೀವು ಹೊಂದಿಕೊಳ್ಳಬೇಕು.
- ಪ್ರತಿದಿನ ಬೆಳಿಗ್ಗೆ 7ರಿಂದ ರಾತ್ರಿ 9ರವರೆಗೆ (ಅಗತ್ಯ ಬಿಡುವುಗಳೊಂದಿಗೆ) ನಡೆಯುವ ತರಬೇತಿಯ ಕಠಿಣ ದೈಹಿಕ ಮಾನಸಿಕ ಪರಿಶ್ರಮಕ್ಕೆ ನೀವು ತಯಾರಾಗಿರಬೇಕು. ಆಯ್ಕೆಯಾದರೆ, ಇಂಥ ಪರಿಶ್ರಮಕ್ಕೆ ಅಗತ್ಯವಾದ ದೈಹಿಕ-ಮಾನಸಿಕ ಸಾಮರ್ಥ್ಯ ಇದೆಯೆಂದು ನುರಿತ ವೈದ್ಯರಿಂದ ದೃಢೀಕರಣ ಪತ್ರ ತರಬೇಕಾಗುತ್ತದೆ.
- ವರ್ಷದಲ್ಲಿ ಒಮ್ಮೆ ಮಧ್ಯಂತರ ರಜಾದಿನಗಳನ್ನು ಬಿಟ್ಟರೆ ಕೇಂದ್ರವು ಭಾನುವಾರವೂ ಸೇರಿದಂತೆ ಎಲ್ಲಾ ದಿನಗಳಲ್ಲೂ ಕೆಲಸ ಮಾಡುತ್ತದೆ. ಇದಕ್ಕೆ ನೀವು ಸಿದ್ಧರಿರಬೇಕು.
- ತರಬೇತಿಯಾದ್ಯಂತ ತರಗತಿಗಳಲ್ಲೂ ತಾಲೀಮುಗಳಲ್ಲೂ ಮೊಬೈಲ್ ಫೋನ್ ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ.
ತರಬೇತಿಯ ಅವಧಿಯಲ್ಲಿ ಯಾವುದೇ ಕಾರಣಕ್ಕೂ ವೈಯಕ್ತಿಕ ರಜೆ ಕೇಳುವ ಹಾಗಿಲ್ಲ. ಶಿಕ್ಷಣದ ಅವಧಿಯಲ್ಲಿ ಯಾವುದೇ ಸಂದರ್ಶನ ಅಥವಾ ಪರೀಕ್ಷೆಗಳಿಗೆ ಹಾಜರಾಗಲು ಅವಕಾಶ ಇರುವುದಿಲ್ಲ. - ಅಪರೂಪದ ಸಂದರ್ಭಗಳಲ್ಲಿ ಹೊರತುಪಡಿಸಿ 30 ವರ್ಷಕ್ಕೆ ಮೀರಿದ ಅಭ್ಯರ್ಥಿಗಳನ್ನು ತರಬೇತಿಗೆ ಆಯ್ಕೆ ಮಾಡಲಾಗುವುದಿಲ್ಲ.
2. ಸಂದರ್ಶನದ ಸ್ವರೂಪ ಮತ್ತು ವಿಧಾನ:
- ಈ ಬಾರಿಯ ಆಯ್ಕೆಗೆ ಸಂದರ್ಶನವನ್ನು ಪ್ರತ್ಯೇಕ ಗುಂಪುಗಳಲ್ಲಿ ನಡೆಸಲಾಗುತ್ತದೆ. ಪ್ರತಿಯೊಬ್ಬರಿಗೂ ಈ ದಿನಾಂಕ ಮತ್ತು ಸಮಯದ ಬಗ್ಗೆ ದೂರವಾಣಿ-ವಾಟ್ಸಪ್ ಮುಖಾಂತರ ಮಾಹಿತಿ ನೀಡಲಾಗುತ್ತದೆ. ಪ್ರಾಯೋಗಿಕ ಸಂದರ್ಶನದಲ್ಲಿ ಅಭ್ಯರ್ಥಿಗಳಿಂದ ರಂಗ ಅಭ್ಯಾಸ, ಸಂಗೀತ-ನೃತ್ಯ ಮೊದಲಾದ ಚಟುವಟಿಕೆಗಳನ್ನು ಇಲ್ಲಿಯ ಶಿಕ್ಷಕರು ನಡೆಸುತ್ತಾರೆ. ವೈಯಕ್ತಿಕ, ಮೌಖಿಕ ಸಂದರ್ಶನದಲ್ಲಿ ಪ್ರತಿಯೊಬ್ಬರನ್ನೂ ಪ್ರತ್ಯೇಕವಾಗಿ ಸಂದರ್ಶಿಸಲಾಗುತ್ತದೆ.
- ಈ ಸಂದರ್ಶನಗಳಲ್ಲಿ ಮುಖ್ಯವಾಗಿ ನೀವು ಈಗಾಗಲೇ ಮಾಡಿದ ವಿವಿಧ ರೀತಿಯ ಅಭಿನಯದ ತುಣುಕುಗಳನ್ನೂ ಹಾಗೂ ನಿಮಗೆ ತಿಳಿದಿರುವ ಸಂಗೀತ-ನೃತ್ಯ ಇತ್ಯಾದಿ ಕಲೆಗಳ ಪರಿಚಯವನ್ನೂ ಗಮನಿಸಲಾಗುತ್ತದೆ. ಸಂದರ್ಶನಕ್ಕೆ ಬರುವಾಗ ದೈಹಿಕ ವ್ಯಾಯಾಮಕ್ಕೆ ಅನುಕೂಲವಾಗುವ ಸಡಿಲವಾದ ಉಡುಪು ಧರಿಸಿ ಬರುವುದು ಅಗತ್ಯ.
- ಈ ಸಂದರ್ಶನಕ್ಕೆ ಬಂದುಹೋಗುವ ಪ್ರಯಾಣ ವೆಚ್ಚ ಅಥವಾ ಆ ಸಮಯದಲ್ಲಿ ಊಟತಿಂಡಿಗಳ ಖರ್ಚುಗಳನ್ನು ಅಭ್ಯರ್ಥಿಗಳೇ ಭರಿಸಿಕೊಳ್ಳಬೇಕು. ನೀನಾಸಮ್ನ ಉಪಹಾರ ಗೃಹದಲ್ಲಿ ಊಟ-ತಿಂಡಿಯ ವ್ಯವಸ್ಥೆ ದೊರೆಯುತ್ತದೆ.
ಕಳೆದ ವರ್ಷಗಳಂತೆ ಬಾಹ್ಯ ಶಿಷ್ಯವೇತನದ ಅಭ್ಯರ್ಥಿಗಳನ್ನೂ ಶಿಕ್ಷಕ ಅಭ್ಯರ್ಥಿಗಳನ್ನೂ ಆಯ್ಕೆ ಮಾಡುವುದಿಲ್ಲ.
ಆಯ್ಕೆಯಾದ ವಿದ್ಯಾರ್ಥಿಗಳು ತರಬೇತಿಗೆ ಹಾಜರಾಗುವಾಗ ತುಂಬಬೇಕಾದ ಶುಲ್ಕಗಳು ಹೀಗಿವೆ:
ಊಟ/ವಸತಿ ಭಾಗಶಃ ಶುಲ್ಕ: ರೂ. 35,000 (ಇಡಿಯ ವರ್ಷಕ್ಕೆ); ಪರೀಕ್ಷಾ ಶುಲ್ಕ: ರೂ. 1,500 – ಒಟ್ಟು ರೂ. 36,500 (ಇಡಿಯ ವರ್ಷಕ್ಕೆ)
ಆರೋಗ್ಯ ಠೇವಣಿ: ರೂ. 3,500 (ಆರೋಗ್ಯಕ್ಕಾಗಿ ಖರ್ಚಾದ ಹಣ ಕಳೆದು ಉಳಿದದ್ದನ್ನು ಹಿಂದಿರುಗಿಸಲಾಗುತ್ತದೆ)
ಆರ್ಥಿಕವಾಗಿ ದುರ್ಬಲರಾದ ಕೆಲವೇ ಅರ್ಹ ಅಭ್ಯರ್ಥಿಗಳಿಗೆ ಶುಲ್ಕದಲ್ಲಿ ರಿಯಾಯ್ತಿ ಲಭ್ಯ, ಅದಕ್ಕಾಗಿ ಅಗತ್ಯವಿದ್ದವರು ದಾಖಲೆಗಳ ಸಮೇತ ಖಾಲಿ ಕಾಗದದಲ್ಲಿ ಪ್ರತ್ಯೇಕ ವಿನಂತಿ ಪತ್ರವನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.
ನೀನಾಸಮ್ ರಂಗಶಿಕ್ಷಣ ಕೇಂದ್ರದ ವಾರ್ಷಿಕ ತರಬೇತಿಗೆ
ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ
ಹೆಚ್ಚಿನ ಮಾಹಿತಿಗಾಗಿ ನಮ್ಮ ಈಮೇಲ್ ವಿಳಾಸ: info@ninasam.org
ಮೊಬೈಲ್ ನಂಬರ್: ಶ್ರೀಕಾಂತ್ – 9449337250; (10:30 am – 1 pm; 4 pm – 7 pm)
Ninasam WhatsApp: 8183295646
೨೦೨೬-೨೭ನೇ ಸಾಲಿಗೆ ಅರ್ಜಿ ಸಲ್ಲಿಸುವ ದಿನಾಂಕ ಮುಗಿದಿದೆ
ದಯವಿಟ್ಟು ಗಮನಿಸಿ: ನೀನಾಸಮ್ ರಂಗಶಿಕ್ಷಣ ಕೇಂದ್ರವು ರಂಗಭೂಮಿಯ ವಿವಿಧ ಆಯಾಮಗಳನ್ನು ಕುರಿತ ಸಮಗ್ರ ತರಬೇತಿ ನಡೆಸುತ್ತದೆಯೆ ಹೊರತು ವಿಶೇಷವಾಗಿ ಅಭಿನಯದ ಬಗ್ಗೆಯಾಗಲೀ ಅಥವಾ ಸಿನೆಮಾ ಮತ್ತು ಟಿವಿ ನಟನೆಯ ಬಗ್ಗೆಯಾಗಲೀ ಯಾವುದೇ ರೀತಿಯ ಶಿಕ್ಷಣ ನೀಡುವುದಿಲ್ಲ.
Admission for the year 2026-27 is closed
Recognised and aided by the Govt, of Karnataka, the Ninasam Theatre Institute at Heggodu calls for applications for the 10 months Diploma in Theatre Arts Course for the year 2026-27. Minimum qualification for admission is SSLC, but graduates are preferred. Candidates must have a deep interest in theatre and some experience of working in the field. It is a completely residential course and all male and female students will get hostel and food facility on the campus, and the students also get a partial scholarship towards basic living costs. The one-year course offers both theoretical and practical training in the concepts of the theatre medium, history of drama and theatre, acting, stagecraft and theatre management. Apart from the trained staff in the Institute, teachers from outside are invited all through the year for conducting classes and productions. The Institute also has a good library and audio-visual collection of material. The course will be rigorous, full time, and the students are expected work between 7 am and 9.30 pm every day, with breaks.
Application procedure for the annual training programme at the Ninasam Theatre Training Centre
Please note: Applicants will be notified separately for the interview; they must attend on the specified date.
For further information, please contact us at our email address: info@ninasam.org
Mobile Number: Srikanth – 9449337250; (10:30 am – 1 pm; 4 pm – 7 pm)
Ninasam WhatsApp: 8183295646
Application closed for the year 2026-27
Please note: Ninasam Theatre Institute offers an integrated training into the various aspects of theatre, and it does not give you any specialised training in acting, or any training to work in cinema and TV.
