Summer THEATRE workshop | ಬೇಸಿಗೆ ರಂಗ ತರಬೇತಿ ಶಿಬಿರ
2026ರ ಬೇಸಿಗೆ ರಂಗತರಬೇತಿ ಶಿಬಿರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
Application for Summer Theatre Workshop 2026 is open
Scroll down for reading this in English
-
ಆಸಕ್ತ ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಈ ಅಂತರ್ಜಾಲತಾಣದಲ್ಲಿ ನೇರವಾಗಿ ಅರ್ಜಿ ಸಲ್ಲಿಸಬಹುದು. ಅಥವಾ ಅರ್ಜಿಯನ್ನು ಈ ಅಂತರ್ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಂಡು ಅದನ್ನು ತುಂಬಿ ದಿನಾಂಕ 20 ಏಪ್ರಿಲ್ 2026ರೊಳಗೆ ತಲುಪುವಂತೆ ಅಂಚೆ ಮೂಲಕ ಕೆಳಗಿರುವ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು.
- 18 ರಿಂದ 35 ವರ್ಷದ ನಡುವಿನ ಎಸ್.ಎಸ್.ಎಲ್.ಸಿ. ವರೆಗೆ ಓದಿದ ಯಾರೂ ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದು.
- ರಂಗಭೂಮಿಯಲ್ಲಿ ಗಾಢವಾದ ಆಸಕ್ತಿ ಮತ್ತು ಪ್ರವೇಶ ಇರುವುದು ಅಗತ್ಯ. ಶಿಬಿರದ ಸಮಯದಲ್ಲಿ ನಡೆಸಲಾಗುವ ಅಭಿನಯ ವ್ಯಾಯಾಮಕ್ಕೆ ಅಗತ್ಯವಾದ ದೈಹಿಕ ಮತ್ತು ಮಾನಸಿಕ ದಾರ್ಢ್ಯತೆ ಇರುವುದು ಅಗತ್ಯ.
- ಈ ಬಗ್ಗೆ ಸಂದರ್ಶನ ಇರುವುದಿಲ್ಲ. ಅರ್ಜಿಯ ವಿವರಗಳನ್ನು ಆಧರಿಸಿ ಆಯ್ಕೆ ನಡೆಯುತ್ತದೆ.
- ಸೀಮಿತ ಸಂಖ್ಯೆಯ ಶಿಬಿರಾರ್ಥಿಗಳಿಗೆ ಪ್ರವೇಶ; ಆಯ್ಕೆಯಾದವರಿಗೆ ದಿನಾಂಕ 25 ಏಪ್ರಿಲ್ 2026ರೊಳಗೆ ಈ-ಮೈಲ್ ಅಥವಾ ವಾಟ್ಸಪ್ ದೂರವಾಣಿ ಮೂಲಕ ತಿಳಿಸಲಾಗುತ್ತದೆ.
- ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಶಿಬಿರದ ಶುಲ್ಕವಾಗಿ ಒಟ್ಟು ರೂ. 11,800 (18% GST ಸೇರಿ) ಪ್ರತಿಯೊಬ್ಬ ಶಿಬಿರಾರ್ಥಿಯೂ ನಮ್ಮ ಕಡೆಯಿಂದ ಆಯ್ಕೆ ಪತ್ರ ಬಂದ ಮೇಲೆ ನಾವು ತಿಳಿಸುವ ವಿಧಾನದಲ್ಲಿ ಪಾವತಿಸಬೇಕು.
- ಶಿಬಿರದಲ್ಲಿ ಪೂರ್ಣಾವಧಿ ಭಾಗವಹಿಸುವುದು ಕಡ್ಡಾಯ. ಶಿಬಿರದ ನಡುವೆ ಯಾವುದೇ ರಜೆ ನೀಡಲಾಗುವುದಿಲ್ಲ.
ಅರ್ಜಿ ಸಲ್ಲಿಸಲು ಕಡೆಯ ದಿನಾಂಕ: 20 ಏಪ್ರಿಲ್ 2026
ಹೆಚ್ಚಿನ ಸಂಖ್ಯೆಯ ಅರ್ಜಿಗಳು ಬಂದ ಪಕ್ಷದಲ್ಲಿ ಆನ್-ಲೈನ್ ಅರ್ಜಿ ಸೌಲಭ್ಯವನ್ನು ಈ ದಿನಾಂಕಕ್ಕೆ ಮೊದಲೇ ಮುಚ್ಚಲಾಗುತ್ತದೆ.
ವಿಳಾಸ: ಸಂಚಾಲಕರು, ನೀನಾಸಮ್ ರಂಗಶಿಕ್ಷಣ ಕೇಂದ್ರ, ಹೆಗ್ಗೋಡು, ಸಾಗರ, ಶಿವಮೊಗ್ಗ ಜಿಲ್ಲೆ – ೫೭೭ ೪೧೭
ದೂರವಾಣಿ: ಶ್ರೀಕಾಂತ – 94493 37250
WhatsApp: 8183295646
ಮುಖ್ಯವಾಗಿ ಗಮನಿಸಿ: ಅರ್ಜಿಯಲ್ಲಿ ಸರಿಯಾದ ಈ-ಮೈಲ್ ವಿಳಾಸ ಮತ್ತು ವಾಟ್ಸಪ್ ದೂರವಾಣಿ ಸಂಖ್ಯೆ ಕೊಡುವುದು ಅಗತ್ಯ. ಇಲ್ಲವಾದರೆ ಅರ್ಜಿಯನ್ನು ಗಮನಿಸಲಾಗುವುದಿಲ್ಲ.
This workshop is primarily designed and intended for:
- Youngsters who hope to begin their career in theatre, and
- Practitioners from theatre and cultural groups who have some basic experience and propose to update their skills.
If you wish to apply, please read the following instructions carefully:
- One can fill in and submit the application online, or can also download the application form, fill it in and send it by post to Ninasam, Heggodu, Sagara, Karnataka 577 417.
- Candidates must be within 18-35 age; and preferably should have completed SSLC.
- An intense interest and application in theatre practice is the basic minimum qualification, and the participants must have physical and mental fitness to undergo rigorous workshops.
- There will be no interview and the selections are made on the basis of application.
- All the participants selected for the workshop are intimated by Whatsapp/phone before 25th of April 2026.
- A fee of Rs. 11,800 (incl. 18% GST) is to be paid by all the participants, after receiving a selection letter from us, in which we will inform you about the mode of payment.
- All selected candidates MUST attend the full course. No holidays are given during the workshops and individual leaves are strictly not allowed.
- As this workshop is conducted in Kannada a fluent working knowledge in Kannada is essential.
Last date for applying is 20th of April 2026
If the online applications exceed a limit, the online application facility will be closed before the last date.
For help and more information contact : Shrikanth – 94493 37250
WhatsApp: 8183295646
IMPORTANT NOTICE: In Application: email address, Whatsapp phone number of the applicant are VERY IMPORTANT. Most of the communication further will be done through Whatsapp phone. Applications with no email address and phone number are likely to be rejected.
