ನೀನಾಸಮ್

ಕಲೆಗಳ ಸಂಗಡ ಮಾತುಕತೆ

(ಅಕ್ಟೋಬರ್ ೨೦೨೫)

NINASAM

KALEGALA SANGADA MATUKATE

(Conversation with the Arts) October 2025

ಕಳೆದ ಎರಡೂವರೆ ದಶಕಗಳಿಂದ ಪ್ರತಿವರ್ಷ ಚಲನಚಿತ್ರ-ಸಂಸ್ಕೃತಿ ಶಿಬಿರಗಳನ್ನು ನಡೆಸುತ್ತ ಬಂದಿರುವ ನೀನಾಸಮ್ ಈಗ ಅದರ ಪರಿಷ್ಕೃತ ರೂಪವಾದ `ಕಲೆಗಳ ಸಂಗಡ ಮಾತುಕತೆ’ ಎಂಬ ಕಾರ್ಯಕ್ರಮವನ್ನು ಸಂಘಟಿಸುತ್ತಿದೆ.

೨೦೨೫ ಅಕ್ಟೋಬರ್ ೧ರಿಂದ ೫ರವರೆಗೆ ಐದು ದಿನ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಹಿಂದೆ ನಡೆಯುತ್ತಿದ್ದ ಸಂಸ್ಕೃತಿ ಶಿಬಿರಕ್ಕಿಂತ ಭಿನ್ನವಾಗಿ, ನಿರ್ದಿಷ್ಟ ವಿಷಯಗಳನ್ನು ಕುರಿತ ಉಪನ್ಯಾಸ, ಗೋಷ್ಠಿ, ಸಂವಾದಗಳು ಇರುವುದಿಲ್ಲ.  ಬದಲು, ರಂಗಭೂಮಿ, ಸಾಹಿತ್ಯ, ಸಂಗೀತ, ಸಿನೆಮಾ, ಚಿತ್ರಕಲೆ ಮೊದಲಾದ ಕಲಾಪಠ್ಯಗಳ ಪ್ರಸ್ತುತಿ ಮತ್ತು ಅವನ್ನು ಕುರಿತ ಚರ್ಚೆಗಳು ಇರುತ್ತವೆ.  ಐದೂ ದಿನ ಸಂಜೆ ತಿರುಗಾಟ ಮತ್ತು ನೀನಾಸಮ್ ನಾಟಕಗಳೂ ಸೇರಿದಂತೆ ಕಲಾ ಪ್ರಯೋಗಗಳ ಉತ್ಸವ ಸಾರ್ವಜನಿಕರಿಗೆ ತೆರೆದಿರುತ್ತದೆ.

ಈ ಮಾತುಕತೆಗೆ ಕರ್ನಾಟಕ ಮತ್ತು ಹೊರಗಿನ ಬೇರೆಬೇರೆ ರಾಜ್ಯಗಳ ಕಲಾಕಾರರು, ವಿದ್ವಾಂಸರು, ಲೇಖಕರು ಪ್ರದರ್ಶನಕಾರರಾಗಿಯೂ ಉಪನ್ಯಾಸಕರಾಗಿಯೂ ಬರುತ್ತಾರೆ. ಸೀಮಿತ ಸಂಖ್ಯೆಯ ಅಭ್ಯರ್ಥಿಗಳನ್ನೂ ನೋಂದಾವಣೆ ಮಾಡಿಕೊಳ್ಳಲಾಗುತ್ತದೆ. ಹಾಗೆ ಬರುವವರು ಐದೂ ದಿನ ಪೂರ್ಣಾವಧಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಅಗತ್ಯ, ಭಾಗಶಃ ಪಾಲ್ಗೊಳ್ಳಲು ಅವಕಾಶ ಇಲ್ಲ. ನೀನಾಸಮ್ ಮತ್ತು ಪಕ್ಕದ ಕಾಲೇಜಿನ ಆವರಣದಲ್ಲಿ ಎಲ್ಲಾ ಶಿಬಿರಾರ್ಥಿಗಳಿಗೂ ಸರಳವಾದ ಮತ್ತು ಡಾರ್ಮೆಟರಿ ಮಾದರಿಯ ವಸತಿ ವ್ಯವಸ್ಥೆ ಮಾಡಲಾಗುತ್ತದೆ.

Ninasam organizes ‘Conversation with the Arts 2025’, a different version of the Culture Course that has been annually held at Ninasam for the last two decades and more.

The five-day event, between the 1st and 5th of October 2025, will be different from the earlier Culture Course in various ways. There will be no seminars or panel discussions on a given topic. Instead, there will be presentations and discussions about texts of different kinds—literature, theatre, music, folklore etc. The day-program is for the registered participants and guests, and the evening theatre festival that includes Ninasam and Tirugata Plays along with invited performances will be open for the public.

Artists, scholars and writers from various parts of Karnataka and other states will be resource persons in this program. A limited number of participants will be admitted through application. Participants should attend all five days and there is no option of partial attendance.

The registered participants will be provided accommodation (a shared, dormitory type) at Ninasam and the adjacent college campuses. Participants will have to pay a fixed fee that will take care of their food, accommodation and entrance tickets for the Theatre Festival.

ನೋಂದಾವಣೆಯ ವಿವರಗಳು:

  • ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಯಸುವ ಆಸಕ್ತರು ಈ ಕೆಳಗೆ ಕೊಟ್ಟಿರುವ ಕೊಂಡಿ ಬಳಸಿ ಆನ್-ಲೈನ್‌ನಲ್ಲಿ ನೋಂದಾವಣೆ ಮಾಡಿಕೊಳ್ಳಬಹುದು.
  • ಅಂಚೆ ಮೂಲಕ ನೋಂದಾಯಿಸಲು ಬಯಸುವವರು ಕೆಳಗೆ ಲಭ್ಯವಿರುವ ಅಭ್ಯರ್ಥಿಪತ್ರವನ್ನು ಡೌನ್‌ಲೋಡ್ ಮಾಡಿಕೊಂಡು ವಿವರಗಳನ್ನು ತುಂಬಿ ತಾ. ೫ ಸೆಪ್ಟೆಂಬರ್ ೨೦೨೫ರೊಳಗೆ ನಮಗೆ ತಲುಪುವಂತೆ ಕಳಿಸಬೇಕು.
  • ಸೆಪ್ಟೆಂಬರ್ ಎರಡನೆಯ ವಾರ ಈಮೈಲ್ ಅಥವಾ ವಾಟ್ಸ್ಯಾಪ್ ಮೂಲಕ ಶುಲ್ಕ ಪಾವತಿ ಮತ್ತು ವಸತಿ ಮೊದಲಾದ ಹೆಚ್ಚಿನ ವಿವರಗಳನ್ನು ಕೊಡಲಾಗುವುದು.
  • ಅಧ್ಯಯನದ ತರಗತಿಗಳ ಮಾದರಿಯಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಅಷ್ಟೂ ದಿನ ಭಾಗವಹಿಸುವುದು ಅಗತ್ಯ. ಭಾಗಶಃ ಪಾಲ್ಗೊಳ್ಳುವುದಕ್ಕೆ ಅವಕಾಶವಿಲ್ಲ. ಸಾಕಷ್ಟು ಕಾರ್ಯಕ್ರಮಗಳು ಇಂಗ್ಲಿಷ್‌ನಲ್ಲೂ ನಡೆಯುವುದರಿಂದ ಆ ಭಾಷೆಯ ಪ್ರಾಥಮಿಕ ತಿಳುವಳಿಕೆ ಅಪೇಕ್ಷಣೀಯ.
  • ಕಾರ್ಯಕ್ರಮದ ಎಲ್ಲ ದಿನಗಳ ಊಟ-ತಿಂಡಿ, ವಸತಿ ಮತ್ತು ಸಂಜೆಯ ಕಾರ್ಯಕ್ರಮಗಳಿಗೆ ಪ್ರವೇಶ ಸೇರಿ ಒಟ್ಟು ಶುಲ್ಕ ರೂ. ೬,೦೦೦ (ರೂಪಾಯಿ ಆರು ಸಾವಿರ). ಕಾಲೇಜಿನ ದೃಢೀಕರಣ ಪತ್ರವುಳ್ಳ ವಿದ್ಯಾರ್ಥಿಗಳಿಗೆ ರೂ. ೪,೦೦೦ (ರೂಪಾಯಿ ನಾಲ್ಕು ಸಾವಿರ).

Guidelines for Registration:

  • Interested participants can register online for the event through the below given link.
  • Those who wish to register by sending an application through post, download the application given below. The filled application should reach us before 5 September 2025.
  • We will send more details regarding the fee payment, lodging, etc. during the second week of September through email or whatsapp.
  • Participants shall attend all the sessions over five days and there is no option of partial attendance.
  • The fees to be paid, for breakfast, lunch, snack and dinner along with the entrance tickets for the evening programmes and accommodation, is Rs. 6,000 (Rupees Six Thousand). For college students with a letter from their institution the reduced fee is Rs. 4,000 (Rupees Four Thousand).

ಹಗಲಿನ ಕಾರ್ಯಕ್ರಮಗಳ ತಾತ್ಕಾಲಿಕ ಪಟ್ಟಿ (ಅಭ್ಯರ್ಥಿಗಳಿಗೆ ಮಾತ್ರ):

ಆರಂಭಿಕ ಗೋಷ್ಠಿ (ಹರೀಶ ತ್ರಿವೇದಿ), ಪ್ರತಿನಿತ್ಯ ಹಿಂದಿನ ಸಂಜೆ ನೋಡಿದ ನಾಟಕಗಳ ಚರ್ಚೆ, ಕುಮಾರವ್ಯಾಸಭಾರತ ಗಮಕ (ಶ್ರೀ ಎ.ವಿ. ಪ್ರಸನ್ನ ಮತ್ತು ಶ್ರೀಮತಿ ನಿರ್ಮಲಾ ಪ್ರಸನ್ನ), ಕುಮಾರವ್ಯಾಸಭಾರತ: ಪಠ್ಯ ಮತ್ತು ಅನುವಾದ ಕುರಿತು (ಕೃಷ್ಣಮೂರ್ತಿ ಹನೂರು, ರಾಜೇಂದ್ರ ಚೆನ್ನಿ), ತಮಿಳು ಲೇಖಕ ಜೆಯಮೋಹನ್ ಅವರ ಪರಿಚಯ ಮತ್ತು ಅವರೊಡನೆ ಸಂವಾದ, ಜೆಯಮೋಹನ್ ಕಥಾಪ್ರಸ್ತುತಿ ಮತ್ತು ಸಂವಾದ (ಎನ್.ವಿ. ಶ್ರೀಕಾಂತ ಮತ್ತು ತಂಡ), ಕ್ರಿಯಾಶೀಲ ಬರವಣಿಗೆಯಲ್ಲಿ ಸಂಶೋಧನೆ – ಎರಡು ಪಠ್ಯಗಳೊಂದಿಗೆ ಮುಖಾಮುಖಿ (ಶ್ರಯುನಾ ಭಟ್ಟಾಚಾರ್ಯ ಮತ್ತು ಅಭಿಷೇಕ್ ಚೌಧರಿ), ರಂಗನಿರ್ದೇಶಕಿ ನೀಲಮ್ ಮಾನ್‌ಸಿಂಗ್ ಅವರ ಅನುಭವಕಥನ ಮತ್ತು ಸಂವಾದ, ದಾಸ್ತಾಂಗೋಯಿ ಪ್ರಯೋಗ – ಪೂನಮ್ ಗಿರ್ಧಾನಿ ಮತ್ತು ತಂಡದಿಂದ, ಸಮಾಜಕಾರ್ಯದ ಅನುಭವಗಳು (ಚುಕ್ಕಿ ನಂಜುಂಡಸ್ವಾಮಿ ಮತ್ತು ಹೇಮಲತಾ ಜೈನ್), ಪರಿಸರ ಮತ್ತು ಹಕ್ಕುದಾರಿಕೆ ಕುರಿತ ಪಠ್ಯಗಳು (ಗಜಾನನ ಶರ್ಮ, ಶಿವಾನಂದ ಕಳವೆ), ತಾಳಮದ್ದಲೆ – ಖಾಂಡವ ದಹನ (ರಾಧಾಕೃಷ್ಣ ಕಲ್ಚಾರ್ ಮತ್ತು ತಂಡ), ಪರಿಸರದ ಕಾರ್ಯಶೀಲತೆ (ಜಿ.ಎಸ್. ಜಯದೇವ, ಸುಮನಸ ಕೌಲಗಿ), ಮರಾಠಿ ನಾಟ್ಯಸಂಗೀತ ಕುರಿತ ಪ್ರಾತ್ಯಕ್ಷಿಕೆ (ಚಾರುದತ್ತ ಆಫಳೆ ಮತ್ತು ಭರತನಾಟ್ಯ ಸಂಶೋಧನಾ ಮಂದಿರ ಕಲಾವಿದರಿಂದ), ಕಾವ್ಯ ಪಠ್ಯಗಳು (ವಿಕ್ರಮ ವಿಸಾಜಿ, ನಿತ್ಯಾನಂದ ಶೆಟ್ಟಿ), ಪುತಿನ ಅವರ ಶ್ರೀಹರಿಚರಿತೆ ಕುರಿತು (ಅಕ್ಷರ ಕೆ.ವಿ.), ಮತ್ತು ಸಮಾರೋಪ (ಸತೀಶ್ ಆಳೇಕರ್, ಪುಣೆ). ಈ ಪ್ರಸ್ತುತಿ ಮತ್ತು ಚರ್ಚೆಗಳಲ್ಲಿ ಪಾಲ್ಗೊಳ್ಳುವ ಬೇರೆ ಅತಿಥಿಗಳು: ಟಿ.ಪಿ. ಅಶೋಕ, ಜಸವಂತ ಜಾಧವ್, ಶಂಕರ ವೆಂಕಟೇಶ್ವರನ್, ಮಂಜು ಕೊಡಗು, ದೀಪಾ ಗಣೇಶ್, ವಿವೇಕ ಶಾನಭಾಗ, ಎಂ.ಎಸ್. ಶ್ರೀರಾಮ್, ಮಾಧವ ಚಿಪ್ಪಳಿ, ಬಿ.ಆರ್. ವೆಂಕಟರಮಣ ಐತಾಳ, ಎಂ. ಗಣೇಶ್ ಮೊದಲಾದವರು.

Tentative Schedule of the Day Programmes (only for registered participants):

Inaugural (Harish Trivedi), Discussion of the plays watched, Poetry presentation (Gamaka) from Kumaravyasa Bharata (A.V. Prasanna, Nirmala Prasanna), Kumaravyasa Bharata on text and translation (Krishnamurthy Hanur, Rajendra Chenni), Meet the writer session with Tamil writer Jeyamohan, Presentation of a short story by Jeymohan, Research in creative writing (Shrayana Bhattacharya, Abhishek Choudhuri), Presentation by Neelam Mansingh on her theatre work, Dastangoi performance by Poonam Girdhani and group, Experiences of social work (Chukki Nanjundaswami, Hemalatha Jain), Environment and its legacy (Gajanana Sharma, Shivananda Kalave), Talamaddale performance – Khandava Dahana (Radhakrishna Kalchar and group), Environmental activism (Jayadev G.S., Sumanas Koulagi), Lec-dem on Marathi Natyasangeet (Pt. Charudat Apahale and group, Pune), Kavya texts for Kannada (Vikram Visaji, Nityananda Shetty), Putina’s Sriharicharite (Akshara K.V.), Concluding speech (Satish Alekar). Other resource persons in the event include: T.P. Ashok, Jaswanth Jadhav, Shankar Venkatesvaran, M. Ganesh, Manju Kodagu, Deepa Ganesh, Vivek Shanbhag, M.S. Sriram, Madhava Chippali, B.R. Venkataramana Aithal.

ಸಂಜೆಯ ಕಾರ್ಯಕ್ರಮಗಳು (೭ ರಿಂದ – ಸಾರ್ವಜನಿಕರಿಗೆ):

೧ ಅಕ್ಟೋಬರ್: ತಿರುಗಾಟ ನಾಟಕ: ಹೃದಯದ ತೀರ್ಪು, ನಿರ್ದೇಶನ: ಗಣೇಶ್ ಎಂ.; ೨ ಅಕ್ಟೋಬರ್: ತಿರುಗಾಟ ನಾಟಕ: ಅವತರಣಮ್ ಭ್ರಾಂತಾಲಯಮ್, ನಿರ್ದೇಶನ: ಶಂಕರ್ ವೆಂಕಟೇಶ್ವರನ್; ೩ ಅಕ್ಟೋಬರ್: ನೀನಾಸಮ್ ನಾಟಕ: ಮೀಡಿಯಾ, ನಿರ್ದೇಶನ: ಮಂಜು ಕೊಡಗು, ೪ ಅಕ್ಟೋಬರ್: ಆಹ್ವಾನಿತ ನಾಟಕ: ಸಂಗೀತ ಸೌಭದ್ರ: ಭರತನಾಟ್ಯ ಸಂಶೋಧನಾಮಂದಿರ, ಪುಣೆ, ೫ ಅಕ್ಟೋಬರ್: ಆಹ್ವಾನಿತ ನಾಟಕ: ಕುಹೂ: ಲಿಟ್ಲ್ ಅರ್ಥ್ ಸ್ಕೂಲ್ ಆಫ್ ಥಿಯೇಟರ್, ಕೇರಳ, ನಿರ್ದೇಶನ: ಅರುಣ ಲಾಲ್.

Evening Programmes (from 7pm, open for public):

1 October: Tirugata play: Hrudayada Teerpu, Dir by M. Ganesh, 2 October: Tirugata play: Avataranam Bhrantalayam, Dir by Shankar Venkatesvaran, 3 October: Ninasam play: Medea, Dir by Manju Kodagu, 4 October: Invited play: Sangeeta Soubhadra, by Baharatanatya Sanshodhanamandir, Pune, 5 October: Invited play: Kuhoo, by Little Earth School of Theatre, Dir by Arunlal.

This workshop is intended primarily for cultural enthusiasts from rural and semi urban parts of Karnataka. But it is open to anyone who has a general interest in cultural activities. Many of the sessions and performances in the workshop will be in Kannada, and therefore, those who cannot understand Kannada will have a disadvantage.

ಹೆಚ್ಚಿನ ಅರ್ಜಿಗಳು ಬಂದಿರುವ ಕಾರಣ ನೋಂದಾವಣೆ ನಿಲ್ಲಿಸಲಾಗಿದೆ

Registration has been closed due to the receipt of a large number of applications

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ (ಬೆಳಿಗ್ಗೆ 10ರಿಂದ ರಾತ್ರಿ 8):

ವಾಟ್ಸ್ಯಾಪ್: 8183295646
ಶ್ರೀಕಾಂತ: 94493-37250

ವಿಳಾಸ : ನೀನಾಸಮ್, ಹೆಗ್ಗೋಡು, ಸಾಗರ ಕರ್ನಾಟಕ 577 417
ಈಮೇಲ್: info@ninasam.org

For More information: (10am to 8pm):

WhatsApp: 8183295646
Srikanth: 94493-37250

Contact address: Ninasam, Heggodu, Sagara Shimoga – 577 417,
Email: info@ninasam.org