Ninasam Theatre Institute
Summer Theatre Workshop: May-June 2023
Announcement for Applications
Ninasam Theatre Institute has been conducting this Summer theatre workshop for the last several years. This year, the workshop is being held from 12th May to 1st of June 2023 (both days included). As in the earlier workshops, the workshop sessions are conducted mainly by the teachers from the Ninasam Theatre Institute and guest faculty. A basic introduction to the various aspects of theatre, and some practical classes on sound, movement and design are conducted as part of the workshop. The workshop will also include a short theatre production by the participants, created during the sessions, the presentation of which will take place on the last day.
This workshop is primarily designed and intended for:
- Youngsters who hope to begin their career in theatre, and
- Practitioners from theatre and cultural groups who have some basic experience and propose to update their skills.
If you wish to apply, please read the following instructions carefully:
- One can fill in and submit the application online, or can also download the application form, fill it in and send it by post to Ninasam, Heggodu, Sagara, Karnataka 577 417.
- Candidates must be within 18-35 age; and preferably should have completed SSLC.
- An intense interest and application in theatre practice is the basic minimum qualification, and the participants must have physical and mental fitness to undergo rigorous workshops.
- There will be no interview and the selections are made on the basis of application.
- All the participants selected for the workshop are intimated by Whatsapp/phone before 25th of April 2023.
- A consolidated fee of Rs. 10,000 to cover the food and lodge expenses for 21 days is to be paid by all the participants, after receiving a selection letter from us, in which we will inform you about the mode of payment.
- All selected candidates MUST attend the full course. No holidays are given during the workshops and individual leaves are strictly not allowed.
- As this workshop is conducted in Kannada a fluent working knowledge in Kannada is essential.
Last date for applying is 20th of April 2023 (if the online applications exceed a limit, the online application facility will be closed before the last date).
For help and more information contact : Darshan Cell: +91 63608 77729
IMPORTANT NOTICE
In Application: email address, Whatsapp phone number of the applicant are VERY IMPORTANT. Most of the communication further will be done through Whatsapp phone. Applications with no email address and phone number are likely to be rejected.
ನೀನಾಸಮ್ ರಂಗಶಿಕ್ಷಣ ಕೇಂದ್ರ
ಬೇಸಿಗೆ ರಂಗತರಬೇತಿ ಶಿಬಿರ – ಮೇ–ಜೂನ್ ೨೦೨೩
ಪ್ರಕಟಣೆ: ಶಿಬಿರಾರ್ಥಿಗಳಿಗೆ ಆಹ್ವಾನ
ಕಳೆದ ಎರಡೂವರೆ ದಶಕಗಳಿಂದ ರಂಗತರಬೇತಿ ನಡೆಸುತ್ತಿರುವ ನೀನಾಸಮ್ ರಂಗಶಿಕ್ಷಣ ಕೇಂದ್ರವು ಇದೇ ೨೦೨೩ ಮೇ ೧೨ರಿಂದ ಜೂನ್ ೧ರ ವರೆಗೆ ೨೧ ದಿನಗಳ ರಂಗತರಬೇತಿ ಶಿಬಿರವೊಂದನ್ನು ನಡೆಸುತ್ತಿದೆ. ಈ ಶಿಬಿರದಲ್ಲಿ ರಂಗಶಿಕ್ಷಣ ಕೇಂದ್ರದ ಅಧ್ಯಾಪಕರು ಮತ್ತು ಅತಿಥಿ ಅಧ್ಯಾಪಕರು ತರಬೇತಿ ನಡೆಸಿಕೊಡುತ್ತಾರೆ. ರಂಗಮಾಧ್ಯಮದ ಪ್ರಾಯೋಗಿಕ ಮತ್ತು ಸೈದ್ಧಾಂತಿಕ ವಿಚಾರಗಳ ಬಗ್ಗೆ ಈ ಶಿಬಿರದಲ್ಲಿ ಮಾಹಿತಿಗಳನ್ನು ನೀಡುವ ಜತೆಗೆ ಶಿಬಿರಾರ್ಥಿಗಳಿಗೆ ನುರಿತ ನಿರ್ದೇಶಕರಿಂದ ರಂಗನಾಟಕ ಪ್ರಯೋಗಗಳನ್ನೂ ಮಾಡಿಸಲಾಗುತ್ತದೆ. ಈ ಶಿಬಿರವು ರಂಗಭೂಮಿಯನ್ನು ಪ್ರವೇಶಿಸಬಯಸುವ ಹೊಸಬರಿಗೆ ಮತ್ತು ರಂಗಭೂಮಿಯಲ್ಲಿ ಅನುಭವವಿದ್ದು ಅದನ್ನು ಬೆಳೆಸಿಕೊಳ್ಳಲು ಬಯಸುವವರಿಗೆ ಉಪಯುಕ್ತವಾಗುತ್ತದೆ.
ಅರ್ಜಿ ಸಲ್ಲಿಸಬಯಸುವವರಿಗೆ ಅಗತ್ಯ ವಿವರಗಳು ಹೀಗಿವೆ:
- ಆಸಕ್ತ ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಈ ಅಂತರ್ಜಾಲತಾಣದಲ್ಲಿ ನೇರವಾಗಿ ಅರ್ಜಿ ಸಲ್ಲಿಸಬಹುದು. ಅಥವಾ ಅರ್ಜಿಯನ್ನು ಈ ಅಂತರ್ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಂಡು ಅದನ್ನು ತುಂಬಿ ದಿನಾಂಕ ೨೦ ಏಪ್ರಿಲ್ ೨೦೨೩ರೊಳಗೆ ತಲುಪುವಂತೆ ಅಂಚೆ ಮೂಲಕ ಕೆಳಗಿರುವ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು.
- ೧೮ ರಿಂದ ೩೫ ವರ್ಷದ ನಡುವಿನ ಎಸ್.ಎಸ್.ಎಲ್.ಸಿ. ವರೆಗೆ ಓದಿದ ಯಾರೂ ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದು.
- ರಂಗಭೂಮಿಯಲ್ಲಿ ಗಾಢವಾದ ಆಸಕ್ತಿ ಮತ್ತು ಪ್ರವೇಶ ಇರುವುದು ಅಗತ್ಯ. ಶಿಬಿರದ ಸಮಯದಲ್ಲಿ ನಡೆಸಲಾಗುವ ಅಭಿನಯ ವ್ಯಾಯಾಮಕ್ಕೆ ಅಗತ್ಯವಾದ ದೈಹಿಕ ಮತ್ತು ಮಾನಸಿಕ ದಾರ್ಢ್ಯತೆ ಇರುವುದು ಅಗತ್ಯ.
- ಈ ಬಗ್ಗೆ ಸಂದರ್ಶನ ಇರುವುದಿಲ್ಲ. ಅರ್ಜಿಯ ವಿವರಗಳನ್ನು ಆಧರಿಸಿ ಆಯ್ಕೆ ನಡೆಯುತ್ತದೆ.
- ಸೀಮಿತ ಸಂಖ್ಯೆಯ ಶಿಬಿರಾರ್ಥಿಗಳಿಗೆ ಪ್ರವೇಶ; ಆಯ್ಕೆಯಾದವರಿಗೆ ದಿನಾಂಕ ೨೫ ಏಪ್ರಿಲ್ ೨೦೨೩ರೊಳಗೆ ಈ-ಮೈಲ್ ಅಥವಾ ವಾಟ್ಸಪ್ ದೂರವಾಣಿ ಮೂಲಕ ತಿಳಿಸಲಾಗುತ್ತದೆ.
- ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಶಿಬಿರದ ಅವಧಿಯ ಊಟವಸತಿ ವ್ಯವಸ್ಥೆಯ ವೆಚ್ಚವಾಗಿ ಒಟ್ಟು ರೂ. ೧೦,೦೦೦ ಗಳನ್ನು ಪ್ರತಿಯೊಬ್ಬ ಶಿಬಿರಾರ್ಥಿಯೂ ಪಾವತಿಸಬೇಕು. ನಿಮಗೆ ನಮ್ಮ ಕಡೆಯಿಂದ ಆಯ್ಕೆ ಪತ್ರ ಬಂದ ಮೇಲೆ ನಾವು ತಿಳಿಸುವ ವಿಧಾನದಲ್ಲಿ ಈ ಹಣ ಪಾವತಿಸಬೇಕು.
- ಶಿಬಿರದಲ್ಲಿ ಪೂರ್ಣಾವಧಿ ಭಾಗವಹಿಸುವುದು ಕಡ್ಡಾಯ. ಶಿಬಿರದ ನಡುವೆ ಯಾವುದೇ ರಜೆ ನೀಡಲಾಗುವುದಿಲ್ಲ.
ಅರ್ಜಿ ಸಲ್ಲಿಸಲು ಕಡೆಯ ದಿನಾಂಕ: ೨೦ ಏಪ್ರಿಲ್ ೨೦೨೩. ಹೆಚ್ಚಿನ ಸಂಖ್ಯೆಯ ಅರ್ಜಿಗಳು ಬಂದ ಪಕ್ಷದಲ್ಲಿ ಆನ್-ಲೈನ್ ಅರ್ಜಿ ಸೌಲಭ್ಯವನ್ನು ಈ ದಿನಾಂಕಕ್ಕೆ ಮೊದಲೇ ಮುಚ್ಚಲಾಗುತ್ತದೆ.
ಸಂಪರ್ಕ ವಿಳಾಸ – ಸಂಚಾಲಕರು, ನೀನಾಸಮ್ ರಂಗಶಿಕ್ಷಣ ಕೇಂದ್ರ, ಹೆಗ್ಗೋಡು, ಸಾಗರ, ಶಿವಮೊಗ್ಗ ಜಿಲ್ಲೆ ೫೭೭ ೪೧೭. ದೂರವಾಣಿ: ಶ್ರೀ ದರ್ಶನ +೯೧-೬೩೬೦೮-೭೭೭೨೯
ಮುಖ್ಯವಾಗಿ ಗಮನಿಸಿ: ಅರ್ಜಿಯಲ್ಲಿ ಸರಿಯಾದ ಈ-ಮೈಲ್ ವಿಳಾಸ ಮತ್ತು ವಾಟ್ಸಪ್ ದೂರವಾಣಿ ಸಂಖ್ಯೆ ಕೊಡುವುದು ಅಗತ್ಯ. ಇಲ್ಲವಾದರೆ ಅರ್ಜಿಯನ್ನು ಗಮನಿಸಲಾಗುವುದಿಲ್ಲ.