Diploma In Theatre Arts | ಡಿಪ್ಲೊಮಾ ಇನ್ ಥಿಯೇಟರ್ ಆರ್ಟ್ಸ್

Admissions closed for the year

2024-25

ಕರ್ನಾಟಕ ರಾಜ್ಯ ಸರ್ಕಾರದ ಮಾನ್ಯತೆ ಪಡೆದಿರುವ ನೀನಾಸಮ್ ರಂಗಶಿಕ್ಷಣ ಕೇಂದ್ರ 2024-25ನೇ ಸಾಲಿನ ಶಿಕ್ಷಣಕ್ಕೆ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುತ್ತದೆ. ಪ್ರವೇಶಕ್ಕೆ ಕನಿಷ್ಠ ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ. ಇರಬೇಕು. ಪದವೀಧರರಿಗೆ ಆದ್ಯತೆ ಇರುತ್ತದೆ. ರಂಗಭೂಮಿಯಲ್ಲಿ ಆಸಕ್ತಿಯಿದ್ದು, ಸ್ವಲ್ಪಮಟ್ಟಿನ ಅನುಭವ ಇರಬೇಕಾದ್ದು ಅಗತ್ಯ. ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಊಟ, ವಸತಿ ವ್ಯವಸ್ಥೆಯ ಬಾಬ್ತು ಭಾಗಶಃ ವಿದ್ಯಾರ್ಥಿವೇತನ ದೊರೆಯುತ್ತದೆ. ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ರಂಗಕಲ್ಪನೆ, ರಂಗ ಇತಿಹಾಸ, ನಾಟಕ ಇತಿಹಾಸ, ರಂಗನಟನೆ, ರಂಗಸಿದ್ಧತೆ, ರಂಗವ್ಯವಸ್ಥೆ ಮುಂತಾಗಿ ವಿಸ್ತಾರವಾದ ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ಶಿಕ್ಷಣ ನೀಡಲಾಗುತ್ತದೆ. ಕೇಂದ್ರದ ನುರಿತ ಅಧ್ಯಾಪಕರುಗಳಲ್ಲದೆ ಹೊರಗಿನ ತಜ್ಞರನ್ನು ಕರೆಸಿ ಸಾಕಷ್ಟು ಪ್ರಬುದ್ಧ ಶಿಕ್ಷಣ ಕೊಡಲಾಗುತ್ತದೆ. ಒಳ್ಳೆಯ ಗ್ರಂಥ ಭಂಡಾರ ಹಾಗೂ ದೃಶ್ಯಶ್ರವ್ಯ ಪರಿಕರಗಳ ಅನುಕೂಲತೆಯಿದೆ. ವಿದ್ಯಾರ್ಥಿ ವಿದ್ಯಾರ್ಥಿನಿಯರು ಪ್ರತಿದಿನ ಸುಮಾರು 12 (07.00 am- 09.30 pm) ಗಂಟೆಗಳಷ್ಟು ಕಾಲ ಅಭ್ಯಾಸದಲ್ಲಿ ತೊಡಗಿರಬೇಕಾಗುತ್ತದೆ.

Recognised and aided by the Govt, of Karnataka, the Ninasam Theatre Institute at Heggodu calls for applications for the 10 months Diploma in Theatre Arts Course for the year 2024-25. Minimum qualification for admission is SSLC, but graduates are preferred. Candidates must have a deep interest in theatre and some experience of working in the field. It is a completely residential course and all male and female students will get hostel and food facility on the campus, and the students also get a partial scholarship towards basic living costs. The one-year course offers both theoretical and practical training in the concepts of the theatre medium, history of drama and theatre, acting, stagecraft and theatre management. Apart from the trained staff in the Institute, teachers from outside are invited all through the year for conducting classes and productions. The Institute also has a good library and audio-visual collection of material. The course will be rigorous, full time, and the students are expected work between 7 am and 9.30 pm every day, with breaks.

ಡಿಪ್ಲೊಮಾ ಇನ್ ಥಿಯೇಟರ್ ಆರ್ಟ್ಸ್: 2024-25

ಪ್ರವೇಶ ಕೋರಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಸೂಚನೆಗಳು

ನೀನಾಸಮ್ ರಂಗಶಿಕ್ಷಣ ಕೇಂದ್ರದ 2024-25ನೆಯ ವರ್ಷಕ್ಕೆ ಪ್ರವೇಶ ಬಯಸಿ ಅರ್ಜಿ ಸಲ್ಲಿಸುತ್ತಿರುವ ಅಭ್ಯರ್ಥಿಗಳು ಅರ್ಜಿ ತುಂಬುವಾಗ ಮತ್ತು ಆಮೇಲಿನ ಸಂದರ್ಶನದಲ್ಲಿ ಭಾಗವಹಿಸುವಾಗ ಗಮನಿಸಲೇಬೇಕಾದ ಕೆಲವು ಮುಖ್ಯ ಸೂಚನೆಗಳು ಇಲ್ಲಿವೆ.

1. ತರಬೇತಿಯ ಸಾಮಾನ್ಯ ನಿಯಮಗಳು:

 • ರಂಗಶಿಕ್ಷಣ ಕೇಂದ್ರದ ಪರಿಚಯ ಪತ್ರದಲ್ಲಿ ಸೂಚಿಸಿದ ಎಲ್ಲಾ ನಿಯಮಕ್ಕೆ ಹಾಗೂ ಶಿಸ್ತಿಗೆ ಬದ್ಧರಾಗಿರಲು ಸಾಧ್ಯ ಎಂಬುದನ್ನು ನೀವು ದೃಢಪಡಿಸಿಕೊಳ್ಳಬೇಕು. ಮತ್ತು ಈ ಊರಿನ ಹವಾಮಾನ, ಊಟ ತಿಂಡಿ ಹಾಗೂ ವಸತಿಯ ಅನುಕೂಲತೆಗಳಿಗೆ ನೀವು ಹೊಂದಿಕೊಳ್ಳಬೇಕು.
 • ಪ್ರತಿದಿನ ಬೆಳಿಗ್ಗೆ 7ರಿಂದ ರಾತ್ರಿ 9ರವರೆಗೆ (ಅಗತ್ಯ ಬಿಡುವುಗಳೊಂದಿಗೆ) ನಡೆಯುವ ತರಬೇತಿಯ ಕಠಿಣ ದೈಹಿಕ ಮಾನಸಿಕ ಪರಿಶ್ರಮಕ್ಕೆ ನೀವು ತಯಾರಾಗಿರಬೇಕು. ಆಯ್ಕೆಯಾದರೆ, ಇಂಥ ಪರಿಶ್ರಮಕ್ಕೆ ಅಗತ್ಯವಾದ ದೈಹಿಕ-ಮಾನಸಿಕ ಸಾಮರ್ಥ್ಯ ಇದೆಯೆಂದು ನುರಿತ ವೈದ್ಯರಿಂದ ದೃಢೀಕರಣ ಪತ್ರ ತರಬೇಕಾಗುತ್ತದೆ.
 • ವರ್ಷದಲ್ಲಿ ಒಮ್ಮೆ ಮಧ್ಯಂತರ ರಜಾದಿನಗಳನ್ನು ಬಿಟ್ಟರೆ ಕೇಂದ್ರವು ಭಾನುವಾರವೂ ಸೇರಿದಂತೆ ಎಲ್ಲಾ ದಿನಗಳಲ್ಲೂ ಕೆಲಸ ಮಾಡುತ್ತದೆ.  ಇದಕ್ಕೆ ನೀವು ಸಿದ್ಧರಿರಬೇಕು.
 • ತರಬೇತಿಯಾದ್ಯಂತ ತರಗತಿಗಳಲ್ಲೂ ತಾಲೀಮುಗಳಲ್ಲೂ ಮೊಬೈಲ್ ಫೋನ್ ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ.
 • ತರಬೇತಿಯ ಅವಧಿಯಲ್ಲಿ ಯಾವುದೇ ಕಾರಣಕ್ಕೂ ವೈಯಕ್ತಿಕ ರಜೆ ಕೇಳುವ ಹಾಗಿಲ್ಲ. ಶಿಕ್ಷಣದ ಅವಧಿಯಲ್ಲಿ ಯಾವುದೇ ಸಂದರ್ಶನ ಅಥವಾ ಪರೀಕ್ಷೆಗಳಿಗೆ ಹಾಜರಾಗಲು ಅವಕಾಶ ಇರುವುದಿಲ್ಲ.
 • ಅಪರೂಪದ ಸಂದರ್ಭಗಳಲ್ಲಿ ಹೊರತುಪಡಿಸಿ 30 ವರ್ಷಕ್ಕೆ ಮೀರಿದ ಅಭ್ಯರ್ಥಿಗಳನ್ನು ತರಬೇತಿಗೆ ಆಯ್ಕೆ ಮಾಡಲಾಗುವುದಿಲ್ಲ.

2. ಸಂದರ್ಶನದ ಸ್ವರೂಪ ಮತ್ತು ವಿಧಾನ:

 • ಈ ಬಾರಿಯ ಆಯ್ಕೆಗೆ ಸಂದರ್ಶನವನ್ನು ಪ್ರತ್ಯೇಕ ಗುಂಪುಗಳಲ್ಲಿ ನಡೆಸಲಾಗುತ್ತದೆ. ಪ್ರತಿಯೊಬ್ಬರಿಗೂ ಈ ದಿನಾಂಕ ಮತ್ತು ಸಮಯದ ಬಗ್ಗೆ ದೂರವಾಣಿ-ವಾಟ್ಸಪ್ ಮುಖಾಂತರ ಮಾಹಿತಿ ನೀಡಲಾಗುತ್ತದೆ. ಪ್ರಾಯೋಗಿಕ ಸಂದರ್ಶನದಲ್ಲಿ ಅಭ್ಯರ್ಥಿಗಳಿಂದ ರಂಗ ಅಭ್ಯಾಸ, ಸಂಗೀತ-ನೃತ್ಯ ಮೊದಲಾದ ಚಟುವಟಿಕೆಗಳನ್ನು ಇಲ್ಲಿಯ ಶಿಕ್ಷಕರು ನಡೆಸುತ್ತಾರೆ. ವೈಯಕ್ತಿಕ, ಮೌಖಿಕ ಸಂದರ್ಶನದಲ್ಲಿ ಪ್ರತಿಯೊಬ್ಬರನ್ನೂ ಪ್ರತ್ಯೇಕವಾಗಿ ಸಂದರ್ಶಿಸಲಾಗುತ್ತದೆ.
 • ಈ ಸಂದರ್ಶನಗಳಲ್ಲಿ ಮುಖ್ಯವಾಗಿ ನೀವು ಈಗಾಗಲೇ ಮಾಡಿದ ವಿವಿಧ ರೀತಿಯ ಅಭಿನಯದ ತುಣುಕುಗಳನ್ನೂ ಹಾಗೂ ನಿಮಗೆ ತಿಳಿದಿರುವ ಸಂಗೀತ-ನೃತ್ಯ ಇತ್ಯಾದಿ ಕಲೆಗಳ ಪರಿಚಯವನ್ನೂ ಗಮನಿಸಲಾಗುತ್ತದೆ. ಸಂದರ್ಶನಕ್ಕೆ ಬರುವಾಗ ದೈಹಿಕ ವ್ಯಾಯಾಮಕ್ಕೆ ಅನುಕೂಲವಾಗುವ ಸಡಿಲವಾದ ಉಡುಪು ಧರಿಸಿ ಬರುವುದು ಅಗತ್ಯ.
 • ಈ ಸಂದರ್ಶನಕ್ಕೆ ಬಂದುಹೋಗುವ ಪ್ರಯಾಣ ವೆಚ್ಚ ಅಥವಾ ಆ ಸಮಯದಲ್ಲಿ ಊಟತಿಂಡಿಗಳ ಖರ್ಚುಗಳನ್ನು ಅಭ್ಯರ್ಥಿಗಳೇ ಭರಿಸಿಕೊಳ್ಳಬೇಕು. ನೀನಾಸಮ್‌ನ ಉಪಹಾರ ಗೃಹದಲ್ಲಿ ಊಟ-ತಿಂಡಿಯ ವ್ಯವಸ್ಥೆ ದೊರೆಯುತ್ತದೆ. 

ಕಳೆದ ವರ್ಷಗಳಂತೆ ಬಾಹ್ಯ ಶಿಷ್ಯವೇತನದ ಅಭ್ಯರ್ಥಿಗಳನ್ನೂ ಶಿಕ್ಷಕ ಅಭ್ಯರ್ಥಿಗಳನ್ನೂ ಆಯ್ಕೆ ಮಾಡುವುದಿಲ್ಲ.

ಆಯ್ಕೆಯಾದ ವಿದ್ಯಾರ್ಥಿಗಳು ತರಬೇತಿಗೆ ಹಾಜರಾಗುವಾಗ ತುಂಬಬೇಕಾದ ಶುಲ್ಕಗಳು ಹೀಗಿವೆ:

ಊಟ/ವಸತಿ ಭಾಗಶಃ ಶುಲ್ಕ: ರೂ. 35,000 (ಇಡಿಯ ವರ್ಷಕ್ಕೆ); ಪರೀಕ್ಷಾ ಶುಲ್ಕ: ರೂ. 1,500 – ಒಟ್ಟು ರೂ. 36,500 (ಇಡಿಯ ವರ್ಷಕ್ಕೆ)

ಆರೋಗ್ಯ ಠೇವಣಿ: ರೂ. 3,500 (ಆರೋಗ್ಯಕ್ಕಾಗಿ ಖರ್ಚಾದ ಹಣ ಕಳೆದು ಉಳಿದದ್ದನ್ನು ಹಿಂದಿರುಗಿಸಲಾಗುತ್ತದೆ)

ಆರ್ಥಿಕವಾಗಿ ದುರ್ಬಲರಾದ ಕೆಲವೇ ಅರ್ಹ ಅಭ್ಯರ್ಥಿಗಳಿಗೆ ಶುಲ್ಕದಲ್ಲಿ ರಿಯಾಯ್ತಿ ಲಭ್ಯ, ಅದಕ್ಕಾಗಿ ಅಗತ್ಯವಿದ್ದವರು ದಾಖಲೆಗಳ ಸಮೇತ ಖಾಲಿ ಕಾಗದದಲ್ಲಿ ಪ್ರತ್ಯೇಕ ವಿನಂತಿ ಪತ್ರವನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.

Applicants to Ninasam Theatre Institute, when applying for entry during 2024-25, need to know the following important details before they fill in their application, and later attending the interview.

1. General Rules:

 1. They must ensure that they abide to all the rules and regulations stipulated in the prospectus. Also, they must make it sure that they will adjust themselves to the weather, food and the modest lodging facilities available at the Institute campus.
 2. The candidates must be ready for a rigorous training schedule between 7 am and 9 pm (with breaks). They must have the mental and physical stamina to do this, and if selected, will have to produce a certificate by a qualified doctor to that effect.
 3. The Institute works on all the days of the week, including Sundays and holidays, and there will only be one midterm vacation. Mobile phones are strictly forbidden during classes and rehearsals.
 4. No personal leaves are given to any student during the course. No student can attend any interview, examination etc., during the course duration.
 5. Normally candidates above the age of 30 are not selected.

2. The Inteview and its procedures:

 1. For the selection of the batch, the interview will be held separately in batches. The dates and time of such interview will be informed to the candidates on phone or Whatsapp. In the group interview, applicants are made into smaller batches and music-dance exersises are conducted; in the one-to-one interview, specific questions and exersises are given to individual applicants.
 2. In both the group and one to one interview, the main questions and expected demonstrations are related to short excerpts from various plays they have performed, as well as their capacities to sing, dance and play instruments.  Candidates must come with loose clothing to be able to do all these.
 3. The travel expenses for coming to the interview, and the food expenses are to be borne by the candidates.

As like last year NTI will not select any candidates from External Scholarships and Teacher candidates.

Fee Details

Fee towards food and stay: Rs. 35,000 (for the whole year); Exam Fee: Rs. 1,500 – TOTAL Rs. 36,500 (for the whole year)

Health Deposit: Rs. 3,500 (unspent amount will be returned at the end of the year)

A few partial concessions in the fees are available to deserving and financially disadvantaged candidates. For this concession, a separate request letter on blank paper with details and relevant documents are to be attached with the application for admission.

ನೀನಾಸಮ್ ರಂಗಶಿಕ್ಷಣ ಕೇಂದ್ರದ ವಾರ್ಷಿಕ ತರಬೇತಿಗೆ

ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ

 • ಈ ಜಾಲತಾಣದಲ್ಲಿ ಮೂರು ಪ್ರತ್ಯೇಕ ಕಡತಗಳಲ್ಲಿರುವ ಕೇಂದ್ರದ ಪರಿಚಯ ಪತ್ರ, ಅರ್ಜಿ ಫಾರಂ, ಶುಲ್ಕ ಮತ್ತು ಸಂದರ್ಶನದ ವಿವರಗಳು – ಇವನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಿ.
 • ಅಂತರ್ಜಾಲದ ಸಂಪರ್ಕ ಇಲ್ಲದವರು ಕೆಳಗಿರುವ ನೀನಾಸಮ್ ವಿಳಾಸಕ್ಕೆ ಕಾಗದ ಬರೆದು ಉಚಿತವಾಗಿ ಕೇಂದ್ರದ ಪರಿಚಯ ಪತ್ರ, ಅರ್ಜಿ ಫಾರಂ, ಶುಲ್ಕ ಮತ್ತು ಸಂದರ್ಶನದ ವಿವರಗಳು – ಇವನ್ನು ತರಿಸಿಕೊಳ್ಳಬಹುದು.
 • ವಿವರಗಳನ್ನು ಓದಿ ಅರ್ಥ ಮಾಡಿಕೊಂಡು ನೀವು ಅರ್ಜಿ ಸಲ್ಲಿಸಬಹುದೆ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ಗಮನಿಸಿ: ಕನಿಷ್ಠ ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ.  ಪದವೀಧರರಿಗೆ ಆದ್ಯತೆ ಇರುತ್ತದೆ.
 • ಅರ್ಜಿಫಾರಂನ್ನು ಪ್ರಿಂಟ್ ಮಾಡಿಕೊಂಡು ಅದನ್ನು ನಿಮ್ಮದೇ ಹಸ್ತಾಕ್ಷರದಲ್ಲಿ ತುಂಬಿ.
 • ಅದರಲ್ಲಿರುವ ಎಲ್ಲ ಲಗತ್ತುಗಳೊಂದಿಗೆ, ನೀನಾಸಮ್ ರಂಗಶಿಕ್ಷಣ ಕೇಂದ್ರ, ಹೆಗ್ಗೋಡು, ಸಾಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ, ಕರ್ನಾಟಕ 577417 – ಇಲ್ಲಿಗೆ ರಿಜಿಸ್ಟರ್ಡ್ ಅಂಚೆ ಮೂಲಕ ರವಾನಿಸಿ. ಅಪೂರ್ಣ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
 • ಅರ್ಜಿ ಶುಲ್ಕವಾಗಿ ರೂ. 500 ನ್ನು ಕೆಳಗೆ ಕೊಟ್ಟಿರುವ ವಿಧಾನ ಬಳಸಿ ಪಾವತಿಸಿ. ಹಣ ಪಾವತಿಸಿರುವ ವಿವರಗಳನ್ನು ನಿಮ್ಮ ಅರ್ಜಿಯಲ್ಲಿ ನೀಡಿರುವ ಜಾಗದಲ್ಲಿ ನೀಡಬೇಕು. ಅರ್ಜಿ ಶುಲ್ಕ ಕಳಿಸದ ಅಥವಾ ವಿವರಗಳನ್ನು ನೀಡದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
 • ಈ ಶುಲ್ಕವನ್ನು ಯಾವುದೇ ಕಾರಣಕ್ಕೂ ಮರುಪಾವತಿಸಲಾಗುವುದಿಲ್ಲ.
 • ಅಂತರ್ಜಾಲದ ಮೂಲಕ ಅಥವಾ ಈಮೈಲ್ ಮೂಲಕ ಅರ್ಜಿ ಸಲ್ಲಿಸುವ ಅವಕಾಶ ಇರುವುದಿಲ್ಲ.
 • ಅರ್ಜಿ ನಮಗೆ ತಲುಪಲು ಕಡೆಯ ದಿನಾಂಕ 15-ಜೂನ್-2024.
 • ಸಂದರ್ಶನಕ್ಕೆ ಪ್ರತ್ಯೇಕ ಕರೆಯೋಲೆಯನ್ನು ದೂರವಾಣಿ ಮೂಲಕ ಕಳಿಸಲಾಗುತ್ತದೆ; ಜತೆಗಿರುವ ಪತ್ರದಲ್ಲಿ ಸೂಚಿಸಿರುವ ಪ್ರಕಾರ ಸಿದ್ಧತೆ ಮಾಡಿಕೊಂಡು ಸಂದರ್ಶನಕ್ಕೆ ಬನ್ನಿ.

How to apply for the Diploma course at Ninasam Theatre Institute:

 • Download the Prospectus, Application form and Fee and Interview details that are available in three seperate files on this website for free download.
 • Those who do not have access to the web can get Prospectus, Application form and Fee and Interview details for no charge, by writing to Ninasam Theatre Institute at the address given below.
 • Confirm that you are eligible to apply, after reading all the papers. Please Note: Minimum qualification is SSLC, and degree holders are preferred.
 • Print the Application form and fill it in your own handwriting.
 • With all the necessary attachments mentioned in the form, register post this to Ninasam Theatre Institute, Heggodu, Sagara, Shimoga District, Karnataka 577 417. Incomplete applications will not be considered.
 • Rs. 500 towards Application fee can be paid using the method given below. Details of the successful payment should be mentioned in the given section of the application. We will not consider the applications if this payment is not made or if the details of payment are not filled in the application.
 • This fees is non-refundable under any circumstances.
 • Applications are not accepted either online or by email.
 • The last date for the receipt of the application at our end is 15 June 2024.
 • A separate communication will be sent to you for the interview. Come for the interview after preparing yourself as mentioned in the attached papers.

ಗಮನಿಸಿ: ಸಂದರ್ಶನಕ್ಕೆ ಪ್ರತ್ಯೇಕ ಮಾಹಿತಿ ತಿಳಿಸಲಾಗುತ್ತದೆ; ಅಭ್ಯರ್ಥಿಗಳು ಸೂಚಿತ ದಿನಾಂಕಗಳಂದು ಹಾಜರಿರಬೇಕು.

Please note: Applicants will be notified separately for the interview; they must attend on the specified date.

ಹೆಚ್ಚಿನ ಮಾಹಿತಿಗಾಗಿ ನಮ್ಮ ಈಮೇಲ್ ವಿಳಾಸ: [email protected]

ಮೊಬೈಲ್ ನಂಬರ್: ಶ್ರೀಕಾಂತ್ – 9449337250; (10:30 am – 1 pm; 4 pm – 7 pm)

Ninasam WhatsApp: 8183295646

೨೦೨೪-೨೫ನೇ ಸಾಲಿಗೆ ಅರ್ಜಿ ಸಲ್ಲಿಸುವ ದಿನಾಂಕ ಮುಗಿದಿದೆ

Application closed for the year 2024-25

ದಯವಿಟ್ಟು ಗಮನಿಸಿ: ನೀನಾಸಮ್ ರಂಗಶಿಕ್ಷಣ ಕೇಂದ್ರವು ರಂಗಭೂಮಿಯ ವಿವಿಧ ಆಯಾಮಗಳನ್ನು ಕುರಿತ ಸಮಗ್ರ ತರಬೇತಿ ನಡೆಸುತ್ತದೆಯೆ ಹೊರತು ವಿಶೇಷವಾಗಿ ಅಭಿನಯದ ಬಗ್ಗೆಯಾಗಲೀ ಅಥವಾ ಸಿನೆಮಾ ಮತ್ತು ಟಿವಿ ನಟನೆಯ ಬಗ್ಗೆಯಾಗಲೀ ಯಾವುದೇ ರೀತಿಯ ಶಿಕ್ಷಣ ನೀಡುವುದಿಲ್ಲ.

Please note: Ninasam Theatre Institute offers an integrated training into the various aspects of theatre, and it does not give you any specialised training in acting, or any training to work in cinema and TV.