ಕಳೆದ ಎರಡೂವರೆ ದಶಕಗಳಿಂದ ಪ್ರತಿವರ್ಷ ಚಲನಚಿತ್ರ-ಸಂಸ್ಕೃತಿ ಶಿಬಿರಗಳನ್ನು ನಡೆಸುತ್ತ ಬಂದಿರುವ ನೀನಾಸಮ್ ಕಳೆದ ಎರಡು ವರ್ಷಗಳಿಂದ ಅದರ ಪರಿಷ್ಕೃತ ರೂಪವಾದ `ಕಲೆಗಳ ಸಂಗಡ ಮಾತುಕತೆ’ ಎಂಬ ಕಾರ್ಯಕ್ರಮವನ್ನು ಸಂಘಟಿಸುತ್ತಿದೆ.
೨೦೨೪ ಅಕ್ಟೋಬರ್ ೨ ರಿಂದ ೬ ರವರೆಗೆ ಐದು ದಿನ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಹಿಂದೆ ನಡೆಯುತ್ತಿದ್ದ ಸಂಸ್ಕೃತಿ ಶಿಬಿರಕ್ಕಿಂತ ಭಿನ್ನವಾಗಿ, ನಿರ್ದಿಷ್ಟ ವಿಷಯಗಳನ್ನು ಕುರಿತ ಉಪನ್ಯಾಸ, ಗೋಷ್ಠಿ, ಸಂವಾದಗಳು ಇರುವುದಿಲ್ಲ. ಬದಲು, ರಂಗಭೂಮಿ, ಸಾಹಿತ್ಯ, ಸಂಗೀತ, ಸಿನೆಮಾ, ಚಿತ್ರಕಲೆ ಮೊದಲಾದ ಕಲಾಪಠ್ಯಗಳ ಪ್ರಸ್ತುತಿ ಮತ್ತು ಅವನ್ನು ಕುರಿತ ಚರ್ಚೆಗಳು ಇರುತ್ತವೆ. ಐದೂ ದಿನ ಸಂಜೆ ತಿರುಗಾಟ ಮತ್ತು ನೀನಾಸಮ್ ನಾಟಕಗಳೂ ಸೇರಿದಂತೆ ಕಲಾ ಪ್ರಯೋಗಗಳ ಉತ್ಸವ ಸಾರ್ವಜನಿಕರಿಗೆ ತೆರೆದಿರುತ್ತದೆ.
ಈ ಮಾತುಕತೆಗೆ ಕರ್ನಾಟಕ ಮತ್ತು ಹೊರಗಿನ ಬೇರೆಬೇರೆ ರಾಜ್ಯಗಳ ಕಲಾಕಾರರು, ವಿದ್ವಾಂಸರು, ಲೇಖಕರು ಪ್ರದರ್ಶನಕಾರರಾಗಿಯೂ ಉಪನ್ಯಾಸಕರಾಗಿಯೂ ಬರುತ್ತಾರೆ. ಸೀಮಿತ ಸಂಖ್ಯೆಯ ಅಭ್ಯರ್ಥಿಗಳನ್ನೂ ನೋಂದಾವಣೆ ಮಾಡಿಕೊಳ್ಳಲಾಗುತ್ತದೆ.
Ninasam organizes ‘Talking with Literature and the Arts 2024’, a different version of the Culture Course that has been annually held at Ninasam for the last two decades and more.
The five-day event, between the 2nd and 6th of October 2024, will be different from the earlier Culture Course in various ways. There will be no seminars or panel discussions on a given topic. Instead, there will be presentations and discussions about texts of different kinds—literature, theatre, music, folklore, visual arts, cinema etc. The day-program is for the registered participants and guests, however the evening theatre festival that includes Ninasam and Tirugata Plays along with invited performances will be open for the public.
Artists, scholars and writers from various parts of Karnataka and other states will be resource persons in this program. A limited number of participants will be admitted through application.
ಹೆಚ್ಚಿನ ಮಾಹಿತಿ ಪಡೆಯಲು ಈ ಕೆಳಗಿನ ಲಿಂಕ್ ಒತ್ತಿ.
For more details, click the link below.