ಕಳೆದ ಎರಡೂವರೆ ದಶಕಗಳಿಂದ ಪ್ರತಿವರ್ಷ ಚಲನಚಿತ್ರ-ಸಂಸ್ಕೃತಿ ಶಿಬಿರಗಳನ್ನು ನಡೆಸುತ್ತ ಬಂದಿರುವ ನೀನಾಸಮ್ ಈ ವರ್ಷ ಅದರ ಪರಿಷ್ಕೃತ ರೂಪವಾದ `ಕಲೆಗಳ ಸಂಗಡ ಮಾತುಕತೆ ೨೦೨೨’ ಎಂಬ ಕಾರ್ಯಕ್ರಮವನ್ನು ಸಂಘಟಿಸುತ್ತಿದೆ.

೨೦೨೨ ನವೆಂಬರ್ ೫ರಿಂದ ೯ರವರೆಗೆ ಐದು ದಿನ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಹಿಂದೆ ನಡೆಯುತ್ತಿದ್ದ ಸಂಸ್ಕೃತಿ ಶಿಬಿರಕ್ಕಿಂತ ಭಿನ್ನವಾಗಿ, ನಿರ್ದಿಷ್ಟ ವಿಷಯಗಳನ್ನು ಕುರಿತ ಉಪನ್ಯಾಸ, ಗೋಷ್ಠಿ, ಸಂವಾದಗಳು ಇರುವುದಿಲ್ಲ. ಬದಲು, ರಂಗಭೂಮಿ, ಸಾಹಿತ್ಯ, ಸಂಗೀತ, ಸಿನೆಮಾ, ಚಿತ್ರಕಲೆ ಮೊದಲಾದ ಕಲಾಪಠ್ಯಗಳ ಪ್ರಸ್ತುತಿ ಮತ್ತು ಅವನ್ನು ಕುರಿತ ಚರ್ಚೆಗಳು ಇರುತ್ತವೆ. ಕಾರ್ಯಕ್ರಮವು ಗೋಷ್ಠಿಗಳ ರೂಪದಲ್ಲಿ ನಡೆಯದೆ ತರಗತಿಗಳ ಹಾಗೆ ನಡೆಯುತ್ತದೆ. ಐದೂ ದಿನ ಸಂಜೆ ತಿರುಗಾಟ ಮತ್ತು ನೀನಾಸಮ್ ನಾಟಕಗಳೂ ಸೇರಿದಂತೆ ಕಲಾ ಪ್ರಯೋಗಗಳ ಉತ್ಸವ ಸಾರ್ವಜನಿಕರಿಗೆ ತೆರೆದಿರುತ್ತದೆ.

ಈ ಮಾತುಕತೆಗೆ ಕರ್ನಾಟಕದ ಬೇರೆಬೇರೆ ಭಾಗಗಳ ಕಲಾಕಾರರು, ವಿದ್ವಾಂಸರು, ಲೇಖಕರು ಪ್ರದರ್ಶನಕಾರರಾಗಿಯೂ ಶಿಕ್ಷಕರಾಗಿಯೂ ಬರುತ್ತಾರೆ. ಸೀಮಿತ ಸಂಖ್ಯೆಯ ಅಭ್ಯರ್ಥಿಗಳನ್ನೂ ನೋಂದಾವಣೆ ಮಾಡಿಕೊಳ್ಳಲಾಗುತ್ತದೆ.

Ninasam organizes ‘Talking with the Arts 2022’, a different version of the Culture Course that has been annually held at Ninasam for the last two decades and more.

The five-day event, between 5th and 9th of November 2022, will be different from the earlier Culture Course in various ways. There will be no seminars or panel discussions on a given topic. Instead, there will be presentations and discussions about texts of different kinds—literature, theatre, music, folklore, visual arts, cinema etc. The program will emulate a class-room and not a conference. The day-program is for the registered participants and guests, however the evening theatre festival that includes Ninasam and Tirugata Plays along with invited performances will be open for the public.

Artists, scholars and writers from various parts of Karnataka will teach in this program. A limited number of participants will be admitted through application.

ಹೆಚ್ಚಿನ ಮಾಹಿತಿ ಪಡೆಯಲು ಈ ಕೆಳಗಿನ ಲಿಂಕ್ ಒತ್ತಿ.

For more details, click the link below.

ಅರ್ಜಿ ಸ್ವೀಕರಿಸುವ ದಿನಾಂಕ ಮುಗಿದಿದೆ.

Last date for receiving the applications has ended.