how to join

ನೀನಾಸಮ್ ಸಂಸ್ಕೃತಿ ಶಿಬಿರ ೨೦೧೯

ಕಳೆದ ಎರಡೂವರೆ ದಶಕಗಳಿಂದ ಚಲನಚಿತ್ರ-ಸಂಸ್ಕೃತಿ ಶಿಬಿರಗಳನ್ನು ಪ್ರತಿ ಅಕ್ಟೋಬರ್‌ನಲ್ಲಿ ನಡೆಸುತ್ತ ಬಂದಿರುವ ನೀನಾಸಮ್ ಈ ವರ್ಷವೂ ಸಂಸ್ಕೃತಿ ಶಿಬಿರ ೨೦೧೯ನ್ನು ಸಂಘಟಿಸುತ್ತಿದೆ.

೨೦೧೯ ಅಕ್ಟೋಬರ್ ೪ ರಿಂದ ೮ರವರೆಗೆ ಐದು ದಿನ ನಡೆಯಲಿರುವ ಈ ಶಿಬಿರದಲ್ಲಿ ರಂಗಭೂಮಿ, ಸಾಹಿತ್ಯ, ಸಂಗೀತ, ನೃತ್ಯ, ಚಲನಚಿತ್ರ ಮುಂತಾದ ಸಾಂಸ್ಕೃತಿಕ ಮಾಧ್ಯಮಗಳ ಸ್ವರೂಪ ಮತ್ತು ಪರಸ್ಪರ ಸಂಬಂಧ, ಹಾಗೂ ಒಟ್ಟೂ ಸಮಾಜದೊಂದಿಗೆ ಸಂಸ್ಕೃತಿಯ ಸಂಬಂಧ – ಈ ವಿಷಯಗಳ ಬಗ್ಗೆ ಕನ್ನಡದ ಹಾಗೂ ಹೊರನಾಡುಗಳ ಅನೇಕ ಗಣ್ಯರು ಉಪನ್ಯಾಸ, ಚರ್ಚೆ, ಪ್ರಾತ್ಯಕ್ಷಿಕೆಗಳನ್ನು ನಡೆಸಿಕೊಡಲಿದ್ದಾರೆ. ಒಂದು ನಿರ್ದಿಷ್ಟ ವಿಷಯವನ್ನು ಕುರಿತು ಈ ಶಿಬಿರದ ಹಲವು ಉಪನ್ಯಾಸ-ಪ್ರಾತ್ಯಕ್ಷಿಕೆಗಳು ಯೋಜಿತವಾಗಿದ್ದು, ಈ ಬಾರಿ `ಕಲೆಗಳ ಅನುಭವ’ ಎಂಬುದು ಶಿಬಿರದ ಕೇಂದ್ರ ವಿಷಯವಾಗಿರುತ್ತದೆ. ಪ್ರತಿದಿನ ಸಂಜೆ ನೀನಾಸಮ್ ಮತ್ತು ಆಹ್ವಾನಿತ ನಾಟಕ ತಂಡಗಳ ನಾಟಕೋತ್ಸವವನ್ನು ಕೂಡಾ ಏರ್ಪಡಿಸಲಾಗಿದೆ.

ಗ್ರಾಮೀಣ ಮತ್ತು ನಗರೇತರ ಪ್ರದೇಶಗಳಲ್ಲಿ ಸಾಂಸ್ಕ ತಿಕ ಚಟುವಟಿಕೆಗಳನ್ನು ಸಂಘಟಿಸಲು ಆಸಕ್ತಿಯಿರುವವರಿಗಾಗಿ ಈ ಶಿಬಿರ ವಿಶೇಷವಾಗಿ ಯೋಜಿಸಲ್ಪಟ್ಟಿದ್ದು ಅಂಥ ಸಾಂಸ್ಕೃತಿಕ ಸಂಘಟನೆಗಳ ಕಾರ್ಯಕರ್ತರು, ಸಂಸ್ಕ ತಿಯ ಬಗ್ಗೆ ಆಸಕ್ತಿಯಿರುವ ಉಪಾಧ್ಯಾಯರು, ವಿದ್ಯಾರ್ಥಿಗಳು, ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರು ಮತ್ತು ಒಟ್ಟೂ ಸಾಂಸ್ಕೃತಿಕ ಮಾಧ್ಯಮಗಳಲ್ಲಿ ಆಸಕ್ತಿಯಿರುವ ಇತರರೂ ಈ ಶಿಬಿರದಲ್ಲಿ ಭಾಗವಹಿಸಬಹುದು. ಶಿಬಿರದ ಹಲವು ಉಪನ್ಯಾಸಗಳನ್ನು ಕನ್ನಡದಲ್ಲೇ ಯೋಜಿಸಲಾಗದೆಯಾದರೂ ಕೆಲವು ಉಪನ್ಯಾಸಗಳು ಅನಿವಾರ್ಯವಾಗಿ ಇಂಗ್ಲಿಷಿನಲ್ಲಿ ನಡೆಯುತ್ತವೆ.

  • ಈ ಶಿಬಿರದಲ್ಲಿ ಭಾಗವಹಿಸಲಿಚ್ಛಿಸುವವರು ಜತೆಗಿರುವ ಅಭ್ಯರ್ಥಿಪತ್ರದಲ್ಲಿ ತಮ್ಮ ಹೆಸರು, ವಿಳಾಸ, ವಯಸ್ಸು, ವಿದ್ಯಾಭ್ಯಾಸ, ವೃತ್ತಿ ಇವುಗಳ ವಿವರಗಳನ್ನೂ, ತಮಗೆ ಸಾಂಸ್ಕೃತಿಕ ಸಂಘಟನೆಗಳ ಬಗ್ಗೆ ಇರುವ ಅನುಭವ, ಆಸಕ್ತಿಯ ವಿವರಗಳನ್ನೂ, ತಾವು ಯಾವುದಾದರೂ ಸಂಸ್ಥೆಯನ್ನು ಪ್ರತಿನಿಧಿಸುತ್ತಿದ್ದರೆ ಅದರ ವಿವರಗಳನ್ನೂ ತಿಳಿಸಿ, ತಾ. ೫ ಸೆಪ್ಟಂಬರ್ ೨೦೧೯ರೊಳಗೆ ಕಳಿಸಬೇಕು. (ಗಮನಿಸಿ: ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಪತ್ರ ಬಂದರೆ, ಅಂತರ್ಜಾಲದಲ್ಲಿ ಅಭ್ಯರ್ಥಿಪತ್ರ ಸಲ್ಲಿಸುವ ಸೌಲಭ್ಯವನ್ನು ಅದಕ್ಕೂ ಮೊದಲೇ ನಿಲ್ಲಿಸಲಾಗುತ್ತದೆ).
  • ಆಯ್ಕೆಯಾದವರಿಗೆ ಆ ಬಗ್ಗೆ ಸೂಚನೆ ಕೊಡಲಾಗುವುದು.
  • ಶಿಬಿರಕ್ಕೆ ಬರುವ ಎಲ್ಲ ಅಭ್ಯರ್ಥಿಗಳು ಶಿಬಿರದ ಅಷ್ಟೂ ದಿನ ಭಾಗವಹಿಸುವುದು ಅಗತ್ಯ. ಭಾಗಶಃ ಪಾಲ್ಗೊಳ್ಳುವುದಕ್ಕೆ ಅವಕಾಶವಿಲ್ಲ.
  • ಶಿಬಿರದ ಎಲ್ಲ ದಿನಗಳ ಊಟ-ವಸತಿ ಮತ್ತು ಸಂಜೆಯ ಕಾರ್ಯಕ್ರಮಗಳಿಗೆ ಪ್ರವೇಶ ಸೇರಿ ಒಟ್ಟು ಶುಲ್ಕ ರೂ. ೫,೦೦೦-೦೦ (ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಿಂದ ದೃಢೀಕರಣ ಪತ್ರ ಸಲ್ಲಿಸುವ ವಿದ್ಯಾರ್ಥಿಗಳಿಗೆ ರೂ. ೪,೦೦೦).
  • ಈ ಹಣವನ್ನು ಅಭ್ಯರ್ಥಿಪತ್ರದ ಜತೆಗೆ ಅಥವಾ ಆಮೇಲೆ ನಮ್ಮಿಂದ ಪತ್ರ ಬಂದಮೇಲೆ ನೀನಾಸಮ್, ಹೆಗ್ಗೋಡು ಎಂಬ ಹೆಸರಿಗೆ ಕರ್ನಾಟಕ ಬ್ಯಾಂಕ್, ಹೆಗ್ಗೋಡು ಅಥವಾ ಬೇರಾವುದೇ ಬ್ಯಾಂಕಿನ ಸಾಗರ ಶಾಖೆಗೆ ಡಿ.ಡಿ. ತೆಗೆಸಿ ಕಳಿಸಬೇಕು.
  • ನೀನಾಸಮ್‌ನ ಅಂತರ್ಜಾಲ ತಾಣದಲ್ಲೂ ಕೂಡ (ಡೌನ್ ಲೋಡ್ ಟ್ಯಾಬಿನಡಿಯಲ್ಲಿ) ಅಭ್ಯರ್ಥಿ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು; ಅಥವಾ ನೇರವಾಗಿ ಅಂತರ್ಜಾಲದಲ್ಲೇ (ಇಲ್ಲಿ) ಅಭ್ಯರ್ಥಿ ಪತ್ರವನ್ನು ತುಂಬಿ ಸಲ್ಲಿಸಬಹುದು.

ವಿಳಾಸ : ನೀನಾಸಮ್, ಹೆಗ್ಗೋಡು, ಸಾಗರ ಕರ್ನಾಟಕ ೫೭೭ ೪೧೭

ಸೂಚನೆ: ಸರಿಯಾದ ದೂರವಾಣಿ ಸಂಖ್ಯೆ ಮತ್ತು ಇಮೇಲ್ ಐಡಿ ನೀಡುವುದು ಕಡ್ಡಾಯ. ಈ ಮೂಲಕವೇ ನಿಮಗೆ ಶಿಬಿರದ ಬಗ್ಗೆ ಮಾಹಿತಿ ನೀಡಲಾಗುವುದು. ಈ ಎರಡೂ ಮಾಹಿತಿ ಸರಿಯಿಲ್ಲದಿದ್ದಲ್ಲಿ ನಿಮ್ಮ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ.

NINASAM Samskriti Shibira 2019

One of Ninasam’s important activities for more than last 2 decades has been the Culture Course, conducted every October.

This year, in 2019, Ninasam plans to conduct the Culture Course from 4th to 8th October (5 days). Several important writers and thinkers from Karnataka and elsewhere will be taking part as resource persons, and some 150 participants are likely to attend the course. The Course is designed around a specific theme every year, and organised as a combination of special lectures on the theme, lecture-demonstration-discussions on fundamentals of appreciation of art forms like literature, theatre, film, music, dance, and so on -all this during the day-sessions, and a series of performances in the evenings.

Fee towards board, lodging & entrance: Rs. 5,000 (for 5 days)

Concessional Fee for students: Rs. 4,000 (A letter from the head of the educational Institution to be submitted)

Those who wish to attend the course could get the application from the web or from Ninasam office and post the filled in application to Ninasam, Heggodu, Sagara, Shimoga – 577 417

Last date for receiving the applications: September 5.

Please note: In case of a large number of applications, the online registration will be closed before this date.

Information to Participants

  • This workshop is intended primarily for cultural activists from rural and semi urban parts of Karnataka. But it is open to anyone who has a general interest in cultural activities. Some lectures and presentations will be in English, and a Kannada translation is provided when necessary.
  • Many of the sessions and performances in the workshop will be in Kannada, and therefore, those who can not understand Kannada will have a disadvantage.
  • Those who wish to apply could either get the application form from our office; or could download it from the “Download” Tab; and post the filled in application with necessary details, before September 5th Those who are selected will be intimated. Online application facility is also available here.
  • All participants must attend all the days; partial participation is not allowed.
  • Total Fee to cover food, lodging and entrance fee for evening programme for all 5 days is Rs. 5,000. Students, with certificates from the heads of institutions pay a concessional fee of Rs. 4,000.  This has to be paid through a DD in favour of Ninasam, Payable at Karnataka Bank, Heggodu or any other banks, at Sagara (Shimoga district, Karnataka) branch.

Contact: NINASAM, HEGGODU, SAGARA, KARANTAKA 577 417;

Phone: 08183-265646;
Email: [email protected]

NOTE: It is mandatory to provide the phone number and email address correctly; through which we can provide you the information about the Culture Course. In case those details are inaccurate, the application will not be accepted.

[mk_button dimension=”flat” corner_style=”full_rounded” size=”medium” url=”#” align=”center” margin_top=”15″ bg_color=”#ba693b” btn_hover_bg=”#dddbdb” btn_hover_txt_color=”#ffffff”]CLOSED[/mk_button]

Resource Persons (Tentative List)

Rustom Bharucha

K. Hariharan

Gopal Guru

Sudarshan Shetty

Sundar Sarakkai

Siddalingaiah

HS Venkatesha Murthy

Veena Bannanje

Krishnamurthy Hanur

Meenakshi Bali

Jayanth Kaikini

Banu Musthak

Sriram MS

Jogi

Balaji Manohar

Raj B. Shetty

D. Sathyaprakash

Lakshmisha Tolpady and others;

Jaswanth Jadhav (Coordinator).

Evening programs (7.15 pm onwards: for public):

4 Oct. Tirugata Play: Rakshasa Tangadi directed by BR Venkataramana Aithal.

5 Oct. Tirugata Play: Karnasaangatya directed by Ganesh Mandarti

6 Oct. Ninasam Play: Nadubesigeyirula Nalganasu directed by Iqbal Ahmed

7 Oct. Invited Tamil Play: When We Dead Awaken directed by Shankar Venkateshwaran

8 Oct. Invited Tenkutittu Yakshagana performance: Dakshyajna

 

Afternoon Presentations (2.30 to 4 pm: for course participants only)

4 Oct. Dance presentation: by Attakkalari, Bangalore, lead by Jayachandran P

5 Oct. Parijatha Bhajane: Folk Performance, Halagemma Bhajana Mandali, Hadalageri, Vijayapura Dist

6 Oct. Music Recital by TM Krishna, Chennai

7 Oct. Short Play: Vishwamitra Menake Dance Maadodu Enake? (Ninasam)

8 Oct. Lecdem on Kabir and Bhakti Music by Shabnam Virmani.

Kannada application for Ninasam Cultute Course 2019

English application for Ninasam Culture Course 2019

Samskriti Shibira details