ಬಿ.ಸಿ.ಎಸ್. ಅಯ್ಯಂಗಾರ್ ಫೆಲೋಷಿಪ್ ೨೦೧೯ – ಪ್ರಕಟಣೆ
ನೀನಾಸಮ್ ಪ್ರತಿಷ್ಠಾನವು ನಿರ್ವಹಣೆ ಮಾಡುತ್ತಿರುವ ಬಿ.ಸಿ.ಎಸ್. ಅಯ್ಯಂಗಾರ್ ಫೆಲೋಷಿಪ್ನ ೨೦೧೯ರ ಕೊಡುಗೆಗೆ ಬಂದ ಹಲವು ಬೇಡಿಕೆ ಪತ್ರಗಳನ್ನು ಮೂರು ಸದಸ್ಯರ ಒಂದು ಸಮಿತಿಯು ವಿವರವಾಗಿ ಪರಿಶೀಲಿಸಿ ಈ ಕೆಳಕಂಡ ಇಬ್ಬರಿಗೆ ಈ ವರ್ಷ ಫೆಲೋಷಿಪ್ ಕೊಡುವುದೆಂದು ತೀರ್ಮಾನಿಸಿದೆ:
೧. ವಿಜಯಲಕ್ಷ್ಮಿ ದೊಡ್ಡಮನಿ, ಕಲಬುರ್ಗಿ
೨. ಸರಸ್ವತಿ ಎ.ಪಿ., ಬೆಂಗಳೂರು
ಇದರಲ್ಲಿ ಮೊದಲನೆಯವರು ರಂಗಭೂಮಿಯ ವಸ್ತ್ರವಿನ್ಯಾಸದ ಹೆಚ್ಚಿನ ತರಬೇತಿಗಾಗಿ ಮತ್ತು ಎರಡನೆಯವರು ಶಿಕ್ಷಣದೊಳಗೆ ರಂಗಭೂಮಿಯನ್ನು ಬಳಸಿಕೊಳ್ಳುವ ನಿರ್ದಿಷ್ಟ ಯೋಜನೆಗಳನ್ನು ನಡೆಸುವ ಸಲುವಾಗಿ ಈ ಫೆಲೋಷಿಪ್ ಪಡೆದಿದ್ದಾರೆ.
೧. ಸೌಮ್ಯ ಭಾಗ್ವತ್
೨. ಬಸವರಾಜ್ ಕವಡೆನವರ್
ಇವರಿಬ್ಬರು ಆದಿಶಕ್ತಿ ತಂಡದ ತರಬೇತಿಯನ್ನು ಪಡೆಯಲು ಇಚ್ಛಿಸಿದ್ದು ಮುಂದಿನ ವರ್ಷ ಆದಿಶಕ್ತಿ ತಂಡವು ಇಂಥದೇ ತರಬೇತಿ ನೀಡಲು ನೀನಾಸಮ್ ರಂಗಶಿಕ್ಷಣ ಕೇಂದ್ರಕ್ಕೆ ಬಂದಾಗ, ಇವರಿಬ್ಬರನ್ನೂ ವಿಶೇಷ ಆಹ್ವಾನಿತರಾಗಿ ಸೇರಿಸಿಕೊಳ್ಳುವ ಮೂಲಕ ಇವರ ಯೋಜನೆಗೆ ಸಹಾಯ ಮಾಡಬೇಕೆಂದು ನಾವು ನಿರ್ಧರಿಸಿದ್ದೇವೆ.
BCS Iyengar Fellowship 2019: Announcement
A committee of three people has gone through all the applications received for the 2019 issue of the BCS Iyengar Fellowship, which is being administered by Ninasam Pratishthana, and after a detailed scrutiny and discussion, it has decided to award the fellowships to the following candidates:
1. Vijayalaxmi Doddamani, Gulburga
2. Saraswati A.P., Bangalore
The first one proposes to work on advanced training in Theatre Costume making, and the second, to work on using theatre in education.
Both of these had applied for support to get training from Adishakti, and we propose to help by inviting them to a future workshop of Adishakti at the Ninasam Theatre Institute.